ಇನಾಮದಾರ ಮನೆತನಕ್ಕೆ ಸಿಗದ ಟಿಕೆಟ್: ಕಮಲ ಪಾಳೆಯ ಸೇರಿದ ಅಭಿಮಾನಿಗಳು - Kittur



ಕಮಲ ಪಾಳೆಯ ಸೇರಿದ ಅಭಿಮಾನಿಗಳು

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಹಿರಿಯ ಕಾಂಗ್ರೆಸ್ ಮುಖಂಡ ಡಿ. ಬಿ. ಇನಾಮದಾರ ಅವರ ಮನೆತನದವರಿಗೆ ಕಿತ್ತೂರು ಕ್ಷೇತ್ರದ ಟಿಕೆಟ್ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಮುಸ್ಲಿಂ ಸಮಾಜದ ಅನೇಕರು ಏ. 19 ರಂದು ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಬಿಜೆಪಿ ಸೇರಿದರು.

ಮುಸ್ತಾಕ ಸವಣೂರು, ಲಿಯಾಕತ್ ಜಮಾದಾರ, ಅಸ್ಲಂ ತಿಗಡೊಳ್ಳಿ, ಇಕ್ಬಾಲ್ ತಿಗಡೊಳ್ಳಿ, ಯೂಸೂಫ್ ಅತ್ತಾರ, ಸಿರಾಜ್ ಅತ್ತಾರ, ಫೈರೋಜ್ ಮುಗದ, ಆರೀಫ್ ಉಸ್ತಾದ, ಮನ್ಸೂರ ಶೇಖ್, ಅಸ್ಲಾಂ ಜಮಾದಾರ, ಮೌಸಿನ್ ಬೆಳವಡಿ, ಅಬ್ದುಲ್ ಮುಜಾವರ, ಇಜು ಸೈಯ್ಯದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರಲ್ಲಿ ಪ್ರಮುಖರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

0/Post a Comment/Comments