ಗಲಾಟೆ: ಆರೋಪಿ ದಂಪತಿಗೆ ಶಿಕ್ಷೆ - Kittur


 ಗಲಾಟೆ: ಆರೋಪಿ ದಂಪತಿಗೆ ಶಿಕ್ಷೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಮರಿಗೇರಿ ಗ್ರಾಮದಲ್ಲಿ ಮಹಿಳೆ ಜೊತೆ ಗಲಾಟೆ ಮಾಡಿದ ಆರೋಪಿ ದಂಪತಿಗೆ ಇಲ್ಲಿಯ ಕಿರಿಯ ದಿವಾಣಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪರಾಹ ಬೇಗಂ ಸೈಯದ್ ಅವರು ಎರಡು ವರ್ಷ ಸಾದಾ ಶಿಕ್ಷೆ ಮತ್ತು ರೂ. 3000 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ. 

ಕಿತ್ತೂರು ತಾಲೂಕಿನ ಮರಿಗೇರಿ ಗ್ರಾಮದ ಯಮನಪ್ಪ ಸದೆಪ್ಪ ನಿಚ್ಚಣಕಿ ಮತ್ತು ಈತನ ಪತ್ನಿ ಸಾವಕ್ಕ ಶಿಕ್ಷೆಗೊಳಗಾದವರು.  

ಜಮೀನು ವಿಚಾರವಾಗಿ ಸಿದ್ದವ್ವ ಬಸಪ್ಪ ಸೀಗೆಹಳ್ಳಿ ಅವರ ಮನೆ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಈ ಆರೋಪಿಗಳು ಗಲಾಟೆ ಮಾಡಿದ್ದರು. ಈ ಬಗ್ಗೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ 2011 ಏಪ್ರಿಲ್ 5 ರಂದು ಎಸ್‍ಐ ಆರ್. ಎಸ್. ಹೂಗಾರ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಈ ಆರೋಪದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮುತ್ತುರಾಜ್ ದೇವಲಾಪುರ   ವಾದ ಮಂಡಿಸಿದ್ದರು. 

0/Post a Comment/Comments