ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಶಾಸಕ ಮಹಾಂತೇಶ ದೊಡ್ಡಗೌಡರ ಕಿತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಾಮಪತ್ರ ಸಲ್ಲಿಸುವ ಮುನ್ನ ಬೃಹತ್ ಶಕ್ತಿ ಪ್ರದರ್ಶನ ಮಾಡಿದರು.
ಕ್ಷೇತ್ರದಾದ್ಯಂತ ಇರುವ ಬಿಜೆಪಿ ಕಾರ್ಯಕರ್ತರು, ದೊಡ್ಡಗೌಡರ ಅಭಿಮಾನಿಗಳ ಸಾಗರವೇ ಕಿತ್ತೂರು ಪಟ್ಟಣಕ್ಕೆ ಹರಿದು ಬಂದಿತ್ತು. ಎಲ್ಲ ರಸ್ತೆಗಳು ಕಿತ್ತೂರು ಕಡೆಗೆ ತಿರುಗಿದಂತಿದ್ದವು.
ದೊಡ್ಡಗೌಡರ ತಮ್ಮ ಅಧಿಕ ಸಂಖ್ಯೆಯ ಬೆಂಬಲಿಗರೊಂದಿಗೆ ಸೋಮವಾರ ಪೇಟೆಯ ಚನ್ನಮ್ಮ ವರ್ತುಲಕ್ಕೆ ಬಂದಾಗ ಬಿರುಬಿಸಿಲು ನೆತ್ತಿ ಸುಡುತ್ತಿತ್ತು. ಇದ್ಯಾವುದನ್ನು ಲೆಕ್ಕಿಸದೆ ತಂಡ, ತಂಡೋಪವಾಗಿ ಜನರು ಪ್ರವಾಹದ ರೀತಿ ಹರಿದು ಬರಲು ಆರಂಭಿಸಿತ್ತು.
ಡೊಳ್ಳು, ಮಹಾರಾಷ್ಟ್ರದಿಂದ ಆಗಮಿಸಿದ್ದ ಜಾಂಝ್ ಅಬ್ಬರ ಕೇಳಲಾರಂಭಿಸಿತ್ತು. ಜನರೆಡೆಗೆ ನಮಸ್ಕರಿಸಿ ತೆರೆದ ಏರಿದ ದೊಡ್ಡಗೌಡರ ಅವರು ರೋಡ್ ಶೋ ಆರಂಭಿಸಿದರು. ಆಕಾಶದೆತ್ತರಕ್ಕೆ ಮೊಳಗುತ್ತಿದ್ದ ದೊಡ್ಡಗೌಡರ ಹಾಗೂ ಬಿಜೆಪಿ ಪರವಾದ ಘೋಷಣೆಗಳು ರೋಡ್ ಶೋಗೆ ಸಂಭ್ರಮ ತಂದಿತ್ತು. ಇಡೀ ಶೋ ಕಳೆಗಟ್ಟುವಂತೆ ಮಾಡಿತ್ತು.
ಸಾಗರೋಪಾದಿಯಲ್ಲಿ ಬಂದಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಬಾಯಾರಿಕೆ ಆಗದಿರಲೆಂದು ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಟ್ಯಾಂಕ್‍ಗಳನ್ನಿಡಲಾಗಿತ್ತು.
ತೆರೆದ ವಾಹನವೇರಿ ಸಾಗಿದ್ದ ನಾಯಕರ ರೋಡ್ ಶೋ ಚೌಕೀಮಠ ಕ್ರಾಸ್ ಬಳಿ ಬಂದಾಗ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್, ಸಂಸದ ಈರಣ್ಣ ಕಡಾಡಿ, ಪೂನಾದ ಶಾಸಕ ಸಿದ್ಧಾರ್ಥ ಶಿರೋಳಿ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರೂ ವಾಹನವೇರಿದರು. ಇದರಿಂದ ಕಾರ್ಯಕರ್ತರು ಮತ್ತಷ್ಟು ಸಂಭ್ರಮಪಟ್ಟರು.
ರಾಷ್ಟ್ರೀಯ ಹೆದ್ದಾರಿ ಬಳಿಯ ಚನ್ನಮ್ಮ ಪ್ರತಿಮೆಗೆ ಮುಖಂಡರು ಮಾಲಾರ್ಪಣೆ ಮಾಡಿದರು. ಅನಂತರ ತಾಲೂಕು ಆಡಳಿತ ಭವನಕ್ಕೆ ಅರುಣಸಿಂಗ್ ಮತ್ತಿತರ ನಾಯಕರ ಜೊತೆ ತೆರಳಿದ ದೊಡ್ಡಗೌಡರ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಅವರ ಬಳಿ ಮೂರು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು.
ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ದೊಡ್ಡಗೌಡರ ಪತ್ನಿ ಮಂಜುಳಾ, ಅರವಿಂದ ಪಾಟೀಲ, ಚನಬಸಪ್ಪ ಮೊಕಾಶಿ, ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡ್ಡಿ, ಶ್ರೀಕರ ಕುಲಕರ್ಣಿ, ಪ್ರಕಾಶ ಮೂಗಬಸವ, ಜಗದೀಶ ವಸ್ತ್ರದ, ನಿಜಲಿಂಗಯ್ಯ ಹಿರೇಮಠ, ವಿಶ್ವನಾಥ ಬಿಕ್ಕಣ್ಣವರ, ದಿನೇಶ ವಳಸಂಗ, ಮಹಾಂತೇಶ ಏಣಗಿ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಕಿರಣ ಪಾಟೀಲ, ದೌಲತ್ ಪರಂಡೆಕರ, ನಾಗರಾಜ ಅಸುಂಡಿ, ಸಂಗಪ್ಪ ನರಗುಂದ, ವಿವಿಧ ಗ್ರಾಮಗಳಿಂದ ಬಂದಿದ್ದ ಕಾರ್ಯಕರ್ತರು, ಅಭಿಮಾನಿಗಳಿದ್ದರು.
‘ಅವರ’ ಬಗ್ಗೆ ಬೇಡ
ಚನ್ನಮ್ಮನ ಕಿತ್ತೂರು: ಪಕ್ಷ ಬಿಟ್ಟು ಹೋಗಿರುವÀ ಜಗದೀಶ ಶೆಟ್ಟರ, ಲಕ್ಷ್ಮಣ ಸವದಿ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಅವರ ಬಗ್ಗೆ ಮಾತನಾಡುವುದು ಬೇಡ. ಮಹಾಂತೇಶ ದೊಡ್ಡಗೌಡರ ಎಷ್ಟು ಜನಪ್ರಿಯರಾಗಿದ್ದಾರೆ ನೋಡಿ. ಹೋದವರು ಹೋಗಲಿ ಎಂದು ಹೇಳಿದರು.
ಬಿಸಿಲಿನಲ್ಲಿ ಸೇರಿರುವ ಜನರನ್ನು ನೋಡಿದರೆ ದಾಖಲೆ ಮತಗಳಿಂದ ದೊಡ್ಡಗೌಡರ ಆಯ್ಕೆಯಾಗುತ್ತಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
Post a Comment