ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕನ್ಯಾಕುಮಾರಿಯಿಂದ ಪ್ರಾರಂಭಗೊಂಡು ಕಾಶ್ಮೀರದವರೆಗೆ ಸುಮಾರು ಮೂರೂವರೆ ಸಾವಿರ ಕಿ. ಮೀ ವರೆಗೆ ನಡೆಯಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಭಾರತ ಜೋಡೊ ಪಾದಯಾತ್ರೆಯಲ್ಲಿ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಹಬೀಬ ಶಿಲೇದಾರ ಭಾಗವಹಿಸಿ ಮುಖಂಡರೊಂದಿಗೆ ಶುಕ್ರವಾರ ಹೆಜ್ಜೆ ಹಾಕಿದರು.
ಕಿತ್ತೂರು ಕ್ಷೇತ್ರದಿಂದ ತಮ್ಮ ನೂರಾರು ಬೆಂಬಲಿಗರೊಂದಿಗೆ ತೆರಳಿ ಭಾರತ ಜೋಡೊ ಯಾತ್ರೆಗೆ ಸೇರಿಕೊಂಡ ಅವರು ಕಾಂಗ್ರೆಸ್ ಮುಖಂಡರೊಂದಿಗೆ ಹೆಜ್ಜೆ ಹಾಕಿ ಐತಿಹಾಸಿಕ ಪಾದಯಾತ್ರೆಗೆ ಸಾಕ್ಷಿಯಾದರು. ತಾವೂ ಈ ಮಹತ್ವಾಕಾಂಕ್ಷಿ ಯಾತ್ರೆಯ ಒಂದು ಭಾಗವಾಗಿ ಪಕ್ಷದ ಮೇಲಿನ ಅಭಿಮಾನವನ್ನು ಮೆರೆದರು.
ಮುಂಜಾನೆ 5 ಗಂಟೆಗೆ ಕಿತ್ತೂರಿಂದ ಪಯಣ ಆರಂಭಿಸಿದ ಅವರು 11 ಗಂಟೆಗೆ ಬಳ್ಳಾರಿ ತಲುಪಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಈ ಪಾದಯಾತ್ರೆಯಲ್ಲಿ ಶಿಲೇದಾರ ತಂಡ ಪಾಲ್ಗೊಂಡಿತ್ತು. ಕಿತ್ತೂರು ಕ್ಷೇತ್ರದ ಉಸ್ತುವಾರಿ ದಯಾನಂದ ಪಾಟೀಲ, ಶಾಸಕಿ ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಅಶೋಕ ಪಟ್ಟಣ ಅವರೂ ಪಾದಯಾತ್ರೆಯಲ್ಲಿದ್ದರು.
ವಿಜಯಕುಮಾರ ಶಿಂಧೆ, ಅಬ್ದುಲ್ ಮುಲ್ಲಾ, ವಿಶಾಲ ವಾಲಿ, ಸಿದ್ರಾಮ ಅಪ್ಪೋಜಿ, ಅದೃಶ್ಯ ಗಳಗಿ, ಶಿವು ಗಡೆಣ್ಣವರ, ಸಲೀಂ ಮೊಕಾಶಿ, ಸಮೀರ ಪಟೇಲ್, ಪುಂಡಲೀಕ ಹುಚ್ಚಾನಟ್ಟಿ, ಬಾಬಾಜಾನ ಬೆಳವಡಿ, ಸಾವಂತ ಸಂಗ್ರೇಶಕೊಪ್ಪ, ಮಕ್ಬುಲ್ ಸನದಿ, ಮಡಿವಾಳಿ ನಾಯ್ಕರ ಇತರರು ಪಾಲ್ಗೊಂಡಿದ್ದರು.
Post a Comment