ವಿದ್ಯಾರ್ಥಿಗಳಿಗೆ ಎನ್‍ಟಿಸಿ ಪ್ರಮಾಣಪತ್ರ ವಿತರಣೆ - Kittur

 ವಿದ್ಯಾರ್ಥಿಗಳಿಗೆ ಎನ್‍ಟಿಸಿ ಪ್ರಮಾಣಪತ್ರ ವಿತರಣೆ

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು:
ದೇಶದಲ್ಲಿಯ ಸುಮಾರು 15ಸಾವಿರ ಐಟಿಐ ಕೇಂದ್ರಗಳಲ್ಲಿ 10 ಲಕ್ಷ ಅಂದಾಜು ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ನ್ಯಾಶನಲ್ ಟ್ರೇಡ್ ಪ್ರಮಾಣಪತ್ರ (ಎನ್‍ಟಿಸಿ) ವಿತರಣೆ ಮಾಡುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಸ್. ಬಿ. ದಳವಾಯಿ ನುಡಿದರು.
ತಾಲೂಕಿನ ಹುಲಿಕಟ್ಟಿ ಐಟಿಐ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಕೈಗಾರಿಕೆ ತರಬೇತಿ (ಐಟಿಐ) ಪೂರ್ಣಗೊಳಿಸಿದ ಇಲ್ಲಿಯ 70 ವಿದ್ಯಾರ್ಥಿಗಳು ನ್ಯಾಶನಲ್ ಟ್ರೇಡ್ ಪ್ರಮಾಣಪತ್ರ (ಎನ್‍ಟಿಸಿ) ಪಡೆದುಕೊಂಡರು.
ಕಿತ್ತೂರು ಪದವಿ ಕಾಲೇಜು ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಮಾತನಾಡಿ,  ಸುಸಜ್ಜಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಒಳ್ಳೆಯ ಉದ್ಯೋಗ ಪಡೆಯಲು ಪ್ರಯತ್ನಿಸಬೇಕು ಎಂದು ನುಡಿದರು.
ಕೇಂದ್ರದ ಪ್ರಾಚಾರ್ಯ ರೇವತಿ ವಿ. ಅಧ್ಯಕ್ಷತೆ ವಹಿಸಿದ್ದರು. ಸಂತೋಷ ಭಜಂತ್ರಿ ಪ್ರಾರ್ಥಿಸಿದರು. ಉಷಾ ಬಾಗಲಕೋಟಿ ಸ್ವಾಗತಿಸಿದರು. ಬಿ.ಎನ್ .ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಸುನೀಲ ಇಳಗಾರ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಭಾರತಿ ಮಠದ ನಿರೂಪಿಸಿದರು. ಆದಿನಾಥ ವಣ್ಣೂರ ವಂದಿಸಿದರು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 

0/Post a Comment/Comments