‘ಬಿಜೆಪಿ ನಾಯಕರು ಮಾಡುವುದಿಲ್ಲ ಹೊಂದಾಣಿಕೆ ರಾಜಕಾರಣ' - Kittur

ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ : ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದ್ದೇನು..?

‘ಬಿಜೆಪಿ ನಾಯಕರು ಮಾಡುವುದಿಲ್ಲ ಹೊಂದಾಣಿಕೆ ರಾಜಕಾರಣ'

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಬಿಜೆಪಿಯ ರಾಜಕೀಯ ನಾಯಕರಾರೂ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ. ಅಂತಹ ಗಾಳಿ ಸುದ್ದಿಗಳಿಗೆ ಹೆಚ್ಚು ಮಹತ್ವವನ್ನು ಕೊಡಬೇಕಾದ ಅಗÀತ್ಯವಿಲ್ಲ ಎಂದು ಬಿಜೆಪಿ ಮುಖಂಡ ಹಣಮಂತ ಕೊಟಬಾಗಿ ತಿಳಿಸಿದರು. 

ಪತ್ರಕರ್ತರೊಂದಿಗೆ  ಭಾನುವಾರ ಮಾತನಾಡಿದ ಅವರು, ತಮ್ಮ ರಾಜಕಾರಣದ ಜೀವನದುದ್ದಕ್ಕೂ ಮಾಜಿ ಸಚಿವ ಡಿ. ಬಿ. ಇನಾಮದಾರ ಅವರು ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಮಾಡುವುದು ಅವರ ಜಾಯಮಾನವೂ ಅಲ್ಲ ಎಂದು ನುಡಿದರು.

ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕ ಸುರೇಶ ಮಾರಿಹಾಳ,  ಮುಖಂಡರಾದ ಚನಬಸಪ್ಪ ಮೊಕಾಶಿ, ನಾನು ಸೇರಿದಂತೆ ಕಿತ್ತೂರು ಭಾಗದ ಅನೇಕ ರಾಜಕಾರಣಿಗಳು ಒಂದು ಕಾಲದಲ್ಲಿ ಅವರ ರಾಜಕೀಯ ಗರಡಿಯಲ್ಲಿ ಬೆಳೆದವರು. ಇವರೂ ಕೂಡ ಹೊಂದಾಣಿಕೆ  ರಾಜಕಾರಣ ಮಾಡಿದವರಲ್ಲ ಎಂದು ಅವರು ಪುನರುಚ್ಛರಿಸಿದರು.

ಬಿಜೆಪಿ ನಾಯಕರಿಗೂ ಇಂಥ ರಾಜಕಾರಣ   ಮಾಡುವ ಅನಿವಾರ್ಯವೂ ಇಲ್ಲ. ಅದು, ಅವರ ಒಂದು ಕಾಲದ ಅವರ ಶಿಷ್ಯ ಬಳಗಕ್ಕೂ ಬೇಕಾಗಿಲ್ಲ. ಇವೆಲ್ಲ ವದಂತಿಗಳು ಮಾತ್ರ. ಇಂತಹ ವದಂತಿಗಳಿಗೆ ಕಿವಿಗೊಡಬೇಕಾದ ಅವಶ್ಯಕತೆಯಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

 

0/Post a Comment/Comments