ಕಿತ್ತೂರು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಅವಧಿಯ ಅಧಿಕಾರ ಹಂಚಿಕೆ ಒಡಂಬಡಿಕೆ.. ಸಾಕ್ಷಿಯಾಗಿದ್ದವರು ಯಾರಾರು..?
ಕಿತ್ತೂರು: ಗುಂಪು ಸಾಲ ವಿತರಣೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಕಿತ್ತೂರು ಕರ್ನಾಟಕ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ನೂತನವಾಗಿ ರಚನೆಗೊಂಡ ಮಹಿಳಾ ಗುಂಪುಗಳಿಗೆ ಸಾಲ ವಿತರಣೆ ಕಾರ್ಯಕ್ರಮವು ಸಂಘದ ಸಭಾಭವನದಲ್ಲಿ ಶನಿವಾರ ಜರುಗಿತು.
ಸಾನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾಲದ ಚೆಕ್ ವಿತರಿಸಿ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಸಹಕಾರಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಸಂಸ್ಥೆ ಅಧ್ಯಕ್ಷ ಪ್ರಮೋದ ಜೈನರ, ಉಪಾಧ್ಯಕ್ಷ ಆರ್. ಎಸ್. ಕುಲಕರ್ಣಿ, ನಿರ್ದೇಶಕರಾದ ಮಂಜುನಾಥ ನಂದಿಹಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ ನೇಗಿನಹಾಳ, ಸಹಾಯಕಿ ಸವಿತಾ ಬಾಗೇವಾಡಿ ಉಪಸ್ಥಿತರಿದ್ದರು.