ಟಾಟಾ ಕ್ಯಾಪಿಟಲ್ ಮೈಕ್ರೊ ಫೈನಾನ್ಸ್ ಶಾಖೆ ಉದ್ಘಾಟನೆ - Kittur

ಉದ್ಘಾಟನೆ ವಿಡಿಯೋ ನೋಡಿ

ಟಾಟಾ ಕ್ಯಾಪಿಟಲ್ ಮೈಕ್ರೊ ಫೈನಾನ್ಸ್ ಶಾಖೆ ಉದ್ಘಾಟನೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಇಲ್ಲಿಯ ವಿದ್ಯಾಗಿರಿ  ಯಲ್ಲಿರುವ ಶಿಂಬಿ ಅವರ ವ್ಯಾಪಾರ ಮಳಿಗೆಯಲ್ಲಿ ಟಾಟಾ ಕ್ಯಾಪಿಟಲ್ ಮೈಕ್ರೊ ಫೈನಾನ್ಸ್ ನೂತನ ಶಾಖೆಗೆ ಗುರುವಾರ ಚಾಲನೆ ನೀಡಲಾಯಿತು.

ಬಳಿಕ ಆರ್‍ಎಸ್‍ಎಂ ಬಸವರಾಜ ಮಾತನಾಡಿ, ದೇಶಾದ್ಯಂತ ಈ ಕಂಪನಿಯು 100 ಶಾಖೆಗಳನ್ನು ಹೊಂದಿದೆ. ರೂ. 150 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ ಎಂದರು.

ಎಲ್ಲ ಶಾಖೆಗಳಲ್ಲಿ 50 ಸಾವಿರ ಮಹಿಳಾ ಗ್ರಾಹಕರಿದ್ದಾರೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿ, ಬೆಳಗಾವಿ, ಕಿತ್ತೂರು ಪಟ್ಟಣದಲ್ಲಿ ನೂತನ  ಶಾಖೆ ಪ್ರಾರಂಭಿಸಲಾಗಿದೆ. 25 ಕಿ.ಮೀ ಶಾಖಾ ವ್ಯಾಪ್ತಿಯ ಮಹಿಳಾ ಗ್ರಾಹಕರಿಗೆ ಸಾಲ ವಿತರಣೆ ಮಾಡಲಾಗುವುದು. ಪ್ರತಿ ಮಹಿಳೆಯರಿಗೆ ರೂ. 40 ಸಾವಿರ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗ್ರಾಹಕಿ ಸವಿತಾ ಗುಡಕಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿದರು.

ಎನ್‍ಎಸ್‍ಎಂ ಅಂಬರೀಷ್ ಶಾಹು, ರhಡ್‍ಎಸ್‍ಎಂ ಸುಹಾಸ್ ಶಂಕರ್, ಶಾಖಾ ವ್ಯವಸ್ಥಾಪಕ ಕುಬೇರ ಕ್ಯಾತನವರ, ಸಿಬ್ಬಂದಿಗಳಾದ ಅದೃಶ್ಯ ದೇಮಟ್ಟಿ,  ಈರಣ್ಣ ಸುಳ್ಳದ, ಸೋಮಶೇಖರ  ಸೊಗಲದ, ಗ್ರಾಹಕಿಯರಾದ ರತ್ನಾ ಗಣಾಚಾರಿ, ಮಹಾದೇವಿ ಕತ್ತಿ, ಗಂಗವ್ವ ಮಾಯಣ್ಣವರ, ಶಾಂತವ್ವ ಅಜ್ಜಪ್ಪನವರ  ಇದ್ದರು.

 

0/Post a Comment/Comments