ಜನರ ಮನದೊಡೆಯ ಶಾಸಕ ಮಹಾಂತೇಶ ದೊಡ್ಡಗೌಡರ - Kittur


ಜನಾನುರಾಗಿ ನಾಯಕ: ಪ್ರಗತಿಯತ್ತ ಕಾಯಕ 

ಆಧುನಿಕ ಕಿತ್ತೂರು ನಿರ್ಮಾಣಕ್ಕೆ ದೊಡ್ಡಗೌಡರ ಸಂಕಲ್ಪ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸರಳ ಸ್ವಭಾವ, ಮೃದು ಮಾತು, ಕಠೋರ ನಿರ್ಧಾರ, ನೀಡಿದ ಭರವಸೆÉ ಈಡೇರಿಸುವÀ ಬದ್ಧತೆ, ಬಡವರು, ದೀನರು

, ದಲಿತರ ಬಗ್ಗೆ ಹೊಂದಿರುವ ಅಂತಃಕರಣ, ಯುವಕರ ಕೈಗೆ ಉದ್ಯೋಗ ನೀಡಬೇಕು ಎನ್ನುವ ತುಡಿತ, ರೈತರ ತಾಪತ್ರಯಗಳಿಗೆ ತೀವ್ರಗತಿಯ ಸ್ಪಂದನ..

49 ನೇ ಜನ್ಮದಿನದ ಸಂಭ್ರಮದಲ್ಲಿರುವ ಕಿತ್ತೂರು ಕ್ಷೇತ್ರದ ಜನಾನುರಾಗಿ ಶಾಸಕ, ಅಭಿವೃದ್ಧಿಯ ಹರಿಕಾರ, ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸುಗಾರ ಮಹಾಂತೇಶ ದೊಡ್ಡಗೌಡರ ಅವರಿಗೆ ಹುಟ್ಟಿನಿಂದ ಬಂದಿರುವ ಗುಣಗಳಿವು. ಸಹಕಾರ ಮತ್ತು ರಾಜಕೀಯ ಕ್ಷೇತ್ರ ಈ ನಿಟ್ಟಿನಲ್ಲಿ ಕೆಲಸ ಮಾಡಲು ವೈಯಕ್ತಿಕವಾಗಿ ಅವರಲ್ಲಿ ಭೀಮಶಕ್ತಿ ತುಂಬಿವೆ. ಈ ರಂಗಗಳ ಅಧಿಕಾರ ಬಲವನ್ನು ಜನಸೇವೆಗೆ ಮೀಸಲಿಟ್ಟು ಮುನ್ನಡೆಯುತ್ತಿದ್ದಾರೆ, ಯುವಕರ ಕಣ್ಮಣಿಯೂ ಆಗಿದ್ದಾರೆ.
ಸಾವಿರಾರು ಕೋಟಿ ಅನುದಾನ ತಂದ ಸರದಾರ


ನೀರಾವರಿ, ರಸ್ತೆ, ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು ಪೂರೈಕೆ, ಹೊಲಕ್ಕೆ ಹೋಗುವ ರಸ್ತೆಗಳ ನಿರ್ಮಾಣ ಸೇರಿ ಹಲವಾರು ಜನೋಪಯೋಗಿ ಕಾಮಗಾರಿಗಳ ಅನುಷ್ಠಾನಕ್ಕೆ ಬದ್ಧತೆ ತೋರಿಸಿರುವ ಶಾಸಕರು ವಿಕಾಸಶೀಲ ಪಥದೆಡೆಗೆ ಕ್ಷೇತ್ರ ಕೊಂಡೊಯ್ಯಲು ದಾಪುಗಾಲು ಹಾಕುತ್ತಿದ್ದಾರೆ. ಈ ಮೂಲಕ ಜನಹಿತ ಶಾಸಕರು ಎಂಬ ಅನ್ವರ್ಥನಾಮವನ್ನು ಪ್ರೀತಿಯಿಂದ ಗಳಿಸಿಕೊಂಡಿದ್ದಾರೆ. 
ನೀರಾವರಿ, ರಸ್ತೆ, ಶಿಕ್ಷಣ ಆರೋಗ್ಯ, ಶುದ್ಧ ಕುಡಿಯುವ ನೀರು, ಒಳಚರಂಡಿ ಕಾಮಗಾರಿ, ಬೀದಿ ದೀಪ, ಹೊಲಕ್ಕೆ ಹೋಗುವ ರಸ್ತೆಗಳ ನಿರ್ಮಾಣ, ಕ್ಷೇತ್ರದ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯ ಹತ್ತು, ಹಲವಾರು ಕಾಮಗಾರಿಗಳಿಗೆ ಶಾಸಕ ಮಹಾಂತೇಶ ದೊಡ್ಡಗೌಡರ ತಂದ ಅನುದಾನ ಸುಮಾರು ರೂ. 2400.00 ಕೋಟಿ. 
‘ಕಿತ್ತೂರು ಕರ್ನಾಟಕ' ಕನಸುಗಾರ
ಬೆಳಗಾವಿ, ಬಾಗಲಕೋಟ, ವಿಜಯಪುರ, ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಮುಂಬೈ ಕರ್ನಾಟಕದ ಭಾಗವಾಗಿ ಗುರುತಿಸಿಕೊಂಡಿದ್ದ ಈ ಪ್ರದೇಶಕ್ಕೆ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕೆಂದು ಮೊದಲು ಧ್ವನಿ ಎತ್ತಿದ್ದೇ ಶಾಸಕ ಮಹಾಂತೇಶ ದೊಡ್ಡಗೌಡರು. ಇದಕ್ಕೆ ಅನೇಕ ಶಾಸಕರ ಬೆಂಬಲ ಪಡೆದು ಕಿತ್ತೂರು ಕರ್ನಾಟಕ ಎಂದು ಮುಖ್ಯಮಂತ್ರಿಗಳಿಂದ ಅಧಿಕೃತವಾಗಿ ನಾಮಕರಣ ಮಾಡಿಸಿದರು. ಇದಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿ, ನಿಗಮಕ್ಕೆ ರೂ.3 ಸಾವಿರ ಕೋಟಿ ಅನುದಾನ ನೀಡಬೇಕು ಎಚಿಬುದು ಅವರ ಒತ್ತಾಸೆಯಾಗಿದೆ. ಈ ದಿಸೆಯಲ್ಲಿ ಪ್ರಯತ್ನಗಳನ್ನು ಶಾಸಕರು ನಡೆಸಿರುವುದು ಸ್ತುತ್ಯಾರ್ಹವಾಗಿದೆ ಎನ್ನುತ್ತಾರೆ ಜನರು. 
ಚಚಡಿ ಏತ ನೀರಾವರಿ ಯೋಜನೆ
ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ಒಣ ಬೇಸಾಯ ಪ್ರದೇಶ ನೇಸರಗಿ ಭಾಗದಲ್ಲಿ ರೈತರ ಸಂಕಷ್ಟಕ್ಕೆ ಪೂರ್ಣ ವಿರಾಮ ನೀಡಬೇಕೆಂದು ನಿಶ್ಚಯಿಸಿ ನೇಸರಗಿ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು, ಈಗಾಗಲೇ ಯಡಿಯೂರಪ್ಪ ಆಡಳಿತಾವಧಿಯಲ್ಲಿ ಮಂಜೂರಾಗಿದ್ದ 'ಚಚಡಿ ಏತ ನೀರಾವರಿ ಯೋಜನೆ' ಯ ದೂಳು ಹಿಡಿದಿದ್ದ ಕಡತವನ್ನು ಹುಡುಕಿ ತಗೆದರು ಸದ್ಯ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗಿದೆ.

ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆ
ಈ ಭಾಗದ ಸಮಗ್ರ ನೀರಾವರಿಯ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವರಿಕೆ ಮಾಡಿಸಿದ್ದಾರೆ. ಅದು ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆ. ರೂ. 713.00 ಕೋಟಿ ಅಂದಾಜು ಅನುದಾನ ಮಂಜೂರು ಮಾಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ 
ಅವರನ್ನು ಆಮಂತ್ರಿಸಿ ಭೂಮಿ ಪೂಜೆ  ನೆರವೇರಿಸುವ ಆಲೋಚನೆ ಇಟ್ಟುಕೊಂಡಿದ್ದಾರೆ.
ಜಲ್ ಜೀವನ್À ಮಷಿನ್ ಯೋಜನೆ, ಕೆರೆ ತುಂಬಿಸುವ ಯೋಜನೆ ಜಾರಿಗೆ ಬಂದಿದೆ. ಪ್ರಧಾನಮಂತ್ರಿಗಳ ಕನಸಿನ ಯೋಜನೆ ಜಲ್ ಜೀವನ್À ಮಷಿನ್ ಯೋಜನೆ ಜಾರಿಗೆ ರೂ.120.00 ಕೋಟಿ ಅನುದಾನÀ ಸಮರ್ಪಕವಾಗಿ ಅಳವಡಿಸಿಕೊಂಡು ಕ್ಷೇತ್ರದಲ್ಲಿ ಪ್ರತಿ ಮನೆಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಸಮಗ್ರ ಕಿತ್ತೂರು ಕ್ಷೇತ್ರದ ಎಲ್ಲ ಗ್ರಾಮಗಳ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ. ‘ನವಿಲು ತೀರ್ಥ ಡ್ಯಾಂ' ನಿಂದ ನೀರನ್ನು ಪೂರೈಸಲು ‘ಯರಜರ್ವಿ ಬಹುಗ್ರಾಮ ಕುಡಿಯುವ ನೀರು ಯೋಜನೆ' ಮತ್ತು ‘ದೇಗಾಂವ 
ಬಹುಗ್ರಾಮ ಕುಡಿಯುವ ನೀರು ಯೋಜನೆ'ಗೆ ನಿರಂತರ ಪರಿಶ್ರಮದಿಂದ ರೂ.975.00 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಕಿತ್ತೂರು ಕ್ಷೇತ್ರದ ವ್ಯಾಪ್ತಿಯಲ್ಲಿ ರೂ.482 ಕೋಟಿ ಅನುದಾನ ವೆಚ್ಚ ಮಾಡಲಾಗುವುದು ಎಂಬುದು ಶಾಸಕರ ಮಾಹಿತಿ ಆvದೆ. 

100 ಹಾಸಿಗೆಯ ತಾಲೂಕು ಆಸ್ಪತ್ರೆ
ಕಿತ್ತೂರಿನಲ್ಲಿ ರೂ.34.00 ಕೋಟಿ(ಇದರಲ್ಲಿ 19 ಕೋಟಿ ಆಡಳಿತಾತ್ಮಕ ಅನುಮೋದನೆ ಬಾಕಿ ಇದೆ) ಅನುದಾನದಲ್ಲಿ ಸುಸಜ್ಜಿತ 100 ಹಾಸಿಗೆಗಳ ತಾಲೂಕಾ ಆಸ್ಪತ್ರೆ ನಿರ್ಮಾಣದ ಜೊತೆಗೆ ಆರೋಗ್ಯ ಕ್ಷೇತ್ರಕ್ಕೆ ರೂ.40.50 ಕೋಟಿ ಅನುದಾನ ತಂದು ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ, ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. 
ಮನುಷ್ಯನ ಜೀವನ ಮಟ್ಟ ಬದಲಾಯಿಸುವ ಶಕ್ತಿಯಿರುವ ಶಿಕ್ಷಣಕ್ಕೆ ಶಾಸಕರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಮೂಲಭೂತ ಸೌಕರ್ಯಗಳ ಸುಧಾರಣೆÉ ಮತ್ತು ಉತ್ತಮ ಕಲಿಕಾ ವಾತಾವರಣ ನಿರ್ಮಾಣಕ್ಕೆ ಕಟಿಬದ್ದರಾಗಿದ್ದಾರೆ.
ವಣ್ಣೂರು ಗ್ರಾಮದಲ್ಲಿ 21 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ತಾಲೂಕಾ ಆಸ್ಪತ್ರೆ ನಿರ್ಮಾಣದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಮತ್ತು ರೂ.23.32 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕಟ್ಟಡ ನಿರ್ಮಾಣ, ದುರಸ್ತಿ ಕಾಮಗಾರಿ, ಕಿತ್ತೂರು ಮತ್ತು ಪದವಿ ಮಹಾವಿದ್ಯಾಲಯಗಳ ಕಟ್ಟಡಕ್ಕೆ ರೂ.5.25 ಕೋಟಿ, ಕಿತ್ತೂರು, ನೇಸರಗಿ, ಸಂಪಗಾಂವ, ನಾಗನೂರ ಹಾಗೂ ಪಿಯು ಕಾಲೇಜುಗಳ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ರೂ.5.18 ಕೋಟಿ, ಗ್ರಂಥಾಲಯಗಳ ನಿರ್ಮಾಣಕ್ಕೆ ರೂ.1.20 ಕೋಟಿ ಹುಣಶೀಕಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ 14 ಕೊಠಡಿಗಳ ನಿರ್ಮಾಣಕ್ಕೆ ರೂ.2.00 ಕೋಟಿ ಅನುದಾನ ನೀಡಲಾಗಿದೆ ಎನ್ನುತ್ತಾರೆ ಶಾಸಕ ದೊಡ್ಡಗೌಡರ. 

‘ಒಡೆದ' ಕೋಟೆಗೆ ಸಿದ್ಧವಾಗಿದೆ ಅಂದದ ನಕ್ಷೆ 
ಚನ್ನಮ್ಮನ ಕಿತ್ತೂರು: 23. ಅ. 1824 ರಲ್ಲಿ ನಡೆದ ಪ್ರಥಮ ಕಿತ್ತೂರು ಯುದ್ಧದಲ್ಲಿ ಪ್ರಬಲ ಬ್ರಿಟಿಷರ ವಿರುದ್ಧ ಗೆದ್ದರಾದರೂ ಈ ವಿಜಯೋತ್ಸವದ ಸವಿ ಬಹಳ ದಿನಗಳ ವರೆಗೆ ಉಳಿಯಲಿಲ್ಲ. ಬ್ರಿಟಿμï ಅಧಿಕಾರಿ ಚಾಪ್ಲಿನ್ ನೇತೃತ್ವದಲ್ಲಿ ಹೆಚ್ಚಿನ ಬಲದೊಂದಿಗೆ ಕಿತ್ತೂರು ಮೇಲೆ ಎರಗಿ ಬಂದನು. ವಿರೋಚಿತ ಹೋರಾಟ ನಡೆಸಿದ ಚಿಕ್ಕ ಸಂಸ್ಥಾನ ವೀರ ಸೈನಿಕರು ದ್ವಿತೀಯ ಯುದ್ಧದಲ್ಲಿ ಸೋತರು.
ಸೋತ ನಂತರ ಕಿತ್ತೂರಿಗೆ ಕತ್ತಲಾಯಿತು ಎಂದು ಭಾವಿಸಲಾಯಿತು. ಆದರೆ ಈ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿದ್ದು ಸಂಗೊಳ್ಳಿ ರಾಯಣ್ಣ ಹಾಗೂ ಆತನ ತಂಡದವರು. ಅವರ ನಂತರವೂ ಈ ಹೋರಾಟ 1947 ವರೆಗೆ ನಡೆಯಿತು. ಅನೇಕ ಹೋರಾಟಗಾರರಿಗೆ ರಾಣಿ ಚನ್ನಮ್ಮನ ಹೋರಾಟ ಸ್ಫೂರ್ತಿಯಾಯಿತು. ಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಗಳು ಹೊತ್ತಿಕೊಂಡವು ಎಂಬುದು ಇತಿಹಾಸ.
ಸ್ವಾತಂತ್ರ್ಯ ಸಿಕ್ಕ ನಂತರವೂ ಪಾಳು ಬಿದ್ದ ಕಿತ್ತೂರು ಅಭಿವೃದ್ಧಿಗೆ ಅನೇಕರು ಶ್ರಮಿಸಿದರು. ಅವರಲ್ಲಿ ಪ್ರಮುಖವಾದ ಹೆಸರು ದಿ. ಎಸ್. ಆರ್. ಕಂಠಿ ಅವರದ್ದು. ಇವರು ಕಾಲವಾದ ನಂತರ ಹೆಚ್ಚು ಮೊತ್ತ ಕಿತ್ತೂರು ಅಭಿವೃದ್ಧಿ ಬಿಡುಗಡೆಯಾಗಿದ್ದು 1992ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ. ಅದು ಅಂದು ನೀರಾವರಿ ಸಚಿವರಾಗಿದ್ದ ಮಲ್ಲಾರಿಗೌಡ ಪಾಟೀಲ ಅವರ ಪ್ರಯತ್ನದಿಂದಾಗಿ ಎಂಬುದನ್ನು ಇಲ್ಲಿನವರು ಸ್ಮರಿಸಿಕೊಳ್ಳುತ್ತಾರೆ.
ಅವರ ನಂತರ ಹೆಚ್ಚು ದುಡ್ಡು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ತಂದವರು, ಶಾಸಕ ಮಹಾಂತೇಶ ದೊಡ್ಡಗೌಡರ. ಕಿತ್ತೂರು ಸಂಸ್ಥಾನದ ಜೊತೆ ನಂಟಿರುವ ಸುಮಾರು 30 ಇತಿಹಾಸ ಪ್ರಸಿದ್ಧ ತಾಣಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ರೂ. 200 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಅದಕ್ಕೆ ಮಂಜೂರಾತಿ ತಂದಿದ್ದು ಸಾಮಾನ್ಯ ಸಂಗತಿಯೇನಲ್ಲ. ಇದರಲ್ಲಿ ಮೊದಲ ಹಂತವಾಗಿ ರೂ. 50 ಬಿಡುಗಡೆಗೆ ತಾತ್ವಿಕ ಒಪ್ಪಿಗೆಯನ್ನು ಸರ್ಕಾರ ನೀಡಿದೆ. ಅದರಲ್ಲಿ ರೂ. 10 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಕಿತ್ತೂರು ಅರಮನೆ ಹೇಗಿತ್ತು ಎಂಬ ಕುತೂಹಲ ಎಲ್ಲರಿಗಿದೆ. ಹೀಗೇ ಇತ್ತೆಂದು ಅಕ್ಷರಗಳಲ್ಲಿ, ಮಾತುಗಳಲ್ಲಿ ವರ್ಣಿಸಿದ್ದು ಇದೆ. ಆದರೆ ಅರಮನೆಯ ಪ್ರತಿರೂಪ ನಿರ್ಮಿಸಲು ಶಾಸಕ ಮಹಾಂತೇಶ ದೊಡ್ಡಗೌಡರ ಮುಂದಾಗಿದ್ದಾರೆ. ತಾತ್ವಿಕ ಒಪ್ಪಿಗೆಯೂ ಸಿಕ್ಕಿದೆ. ನಿವೇಶನ ಗುರುತಿಸುವ ಕೆಲಸವೂ ಸಾಗಿದೆ. ಅರಮನೆಯ ಪ್ರತಿರೂಪ ತಲೆಯೆತ್ತಿ ನಿಂತರೆ ಹೆಚ್ಚು ಪ್ರವಾಸಿಗರನ್ನು ಇದು  ಆಕರ್ಷಿಸಲಿದೆ ಎನ್ನುತ್ತಾರೆ ಶಾಸಕ ಮಹಾಂತೇಶ ದೊಡ್ಡಗೌಡರ.

ಕಾಲೇಜು ಚುನಾವಣೆ ಆಸಕ್ತಿ: ಹತ್ತಿಸಿತು ವಿಧಾನಸೌಧದ ಮೆಟ್ಟಿಲು 
ಚನ್ನಮ್ಮನ ಕಿತ್ತೂರು: ಕಾಲೇಜು ಕಲಿಯುತ್ತಿದ್ದಾಗ ಭಾಗವಹಿಸುತ್ತಿದ್ದ ಚುನಾವಣೆ ಗೀಳು, ಅಲ್ಲಿ ಗೆಲ್ಲಲು ಹಾಕುತ್ತಿದ್ದ ಪಟ್ಟುಗಳು ರಾಜಕೀಯದಲ್ಲೂ ಆಸಕ್ತಿ ಮೂಡಿಸಲು ಕಾರಣವಾದವು. ಅಧಿಕ ಅಧಿಕಾರ ಬಲವುಳ್ಳ ಕ್ಷೇತ್ರವಾಗಿರುವ ಇಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಿದೆ ಅನ್ನಿಸಿತು. ಗ್ರಾಮೀಣ ಪ್ರದೇಶದ ಬಡಕುಟುಂಬಗಳ ಮೂಲ ಸೌಲಭ್ಯಗಳ ನೋವು ಚಿಕ್ಕಂದಿನಲ್ಲಿಯೇ ಅಂತರಾಳ ಹೊಕ್ಕು ಪಾತಾಳಗರಡಿ ಆಡಿಸುತ್ತಲೇ ಇತ್ತು. ಇವರ ಸಮಸ್ಯೆಗಳಿಗೆ ಸಾಧ್ಯವಿದ್ದಷ್ಟು ಪರಿಹಾರಕ್ಕೆ ಶ್ರಮಪಡುವ ತುಡಿತ ನನ್ನಲ್ಲಿ ಬೇರೂರಿತ್ತು. ಹೀಗಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿದೆ. ಹಿರಿಯರ ಆಶೀರ್ವಾದದ ಬಲ ಮತ್ತು ಜನರ ಆಶೀರ್ವಾದದಿಂದ ಶಾಸಕನಾದೆ..
ರಾಜಕೀಯ ಕ್ಷೇತ್ರಕ್ಕೆ ಬರುವ ಮುನ್ನ ಮರೆಯದ ಕೆಲವು  ಇಂಥ ಘಟನೆಗಳನ್ನು ಮೆಲುಕು ಹಾಕಿದರು ಮಹಾಂತೇಶ ದೊಡ್ಡಗೌಡರ.
ದೊಡ್ಡ ಕನಸು ಈಡೇರಿಸಲು ಹಾಕಿಕೊಂಡಿದ್ದ ಆಲೋಚನೆಗೆ ನಿರೀಕ್ಷೆಗೂ ಮೀರಿ ಕುಟುಂಬದ ಬೆಂಬಲ ಸಿಕ್ಕಿತು. ಈ  ಸಂದರ್ಭದಲ್ಲಿ ಪತ್ನಿ ಮಾನಸಿಕ ಸ್ಥೈರ್ಯ ತುಂಬಿ, ಹುರಿದುಂಬಿಸಿದರು. ಅಂದಿನ ನಿರ್ಣಾಯಕ ನಿರ್ಧಾರ ಮರೆಯಲು ಸಾಧ್ಯವಿಲ್ಲ ಎಂದು ಮಾತನಾಡುತ್ತ ಹೋದರು ಗೌಡರು.
ರಾಜಕೀಯ ರಂಗದ ದ್ರೋಣಾಚಾರ್ಯ ಲಕ್ಷ್ಮಣ ಸವದಿ ಅಣ್ಣನವರು. ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ತುಂಬಾ ಪ್ರಯತ್ನಪಟ್ಟರು. ಜೊತೆಗೆ ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಸಂಸದ ಅನಂತಕುಮಾರ್ ಹೆಗಡೆ ಹಾಗೂ ಟಿಕೆಟ್ ನೀಡುವ ಅಂತಿಮ ಸಂದರ್ಭ ಬಂದಾಗ ಯಡಿಯೂರಪ್ಪ ಸಹಾಯ ಮಾಡಿದರು. ಇವೆಲ್ಲ ಮರೆಯದ ಘಟನೆಗಳು ಎಂದು ಹೇಳಿ ನೆನಪಿನಾಳಕ್ಕೆ ಜಾರಿದರು.
ಅಂದಹಾಗೆ, ತಂದೆಯ ಉತ್ತರಾಧಿಕಾರಿಯಾಗಿ ಸಹಕಾರ ಕ್ಷೇತ್ರಕ್ಕೆ ಬಂದವರು ಮಹಾಂತೇಶ ಗೌಡರು. ತಂದೆ ಬಸವಂತರಾಯ ಬೆಳಗಾವಿ ಜಿಲ್ಲಾ ಮಧ್ಯವರ್ತಿ (ಡಿಸಿಸಿ) ಬ್ಯಾಂಕಿನ ಅಧ್ಯಕ್ಷರಾಗಿದ್ದವರು. ಅವರ ಅಕಾಲಿಕ ನಿಧನ ಅವರನ್ನು ಸಹಕಾರ ಕ್ಷೇತ್ರಕ್ಕೆ ಕರೆತಂದಿತು. ಮೊದಲ ಬಾರಿ ಈ ಬ್ಯಾಂಕಿನ ನಿರ್ದೇಶಕರಾಗಿದ್ದಾಗ ಅವರ ವಯಸ್ಸು ಆಗಿತ್ತು ಕೇವಲ 21.
ಶಕ್ತಿ ತುಂಬಿದರು
ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಕೇವಲ 13 ಸಂಘಗಳಿದ್ದವು. ಅವುಗಳ ಆರ್ಥಿಕ ಪರಿಸ್ಥಿತಿಯೂ ಸರಿಯಾಗಿದ್ದಿಲ್ಲ. ಈಗ 103 ಸಂಸ್ಥೆಗಳಿವೆ ಮತ್ತು ಸದೃಢವಾಗಿವೆ. ಇವುಗಳಿಗೆ ಹೆಚ್ಚಿನ ಶಕ್ತಿ ತುಂಬಿದ್ದು, ವಿಸ್ತಾರ ಹೆಚ್ಚಿಸಿದ್ದು ಗೌಡರ ಹೆಗ್ಗಳಿಕೆ ಎನ್ನುತ್ತಾರೆ ಸಹಕಾರ ಕ್ಷೇತ್ರದ ಧುರೀಣರು.
ಮುರಿದುಬಿದ್ದಿದೆ ಗುರು-ಶಿಷ್ಯ ಸಂಬಂಧ!
ಚನ್ನಮ್ಮನ ಕಿತ್ತೂರು: ಮದನಬಾವಿ ಊರಲ್ಲಿಯ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕಲಿತೆ. ನೇಸರ್ಗಿ ವಿದ್ಯಾಮಂದಿರದಲ್ಲಿ ಹೈಸ್ಕೂಲ್ ಶಿಕ್ಷಣ, ಬೆಳಗಾವಿಯ ಚಿಂತಾಮಣಿ ಕಾಲೇಜಿನಲ್ಲಿ ಪಿಯು ಹಾಗೂ 'ಲಿಂಗರಾಜ'ದಲ್ಲಿ ಪದವಿ ಪಡೆದೆ. ಆರ್ ಎಲ್ ಲಾ ಕಾಲೇಜಿನಲ್ಲಿ ಎಲ್ ಎಲ್ ಬಿ ಓದಿದೆ.
ಶಿಕ್ಷಣ ರಂಗದಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲು ಇಷ್ಟೊಂದು ಹೈಫೈ ಇರಲಿಲ್ಲ. ಕಲಿಸುವ ಪದ್ಧತಿ ಮಾದರಿಯಾಗಿತ್ತು.  ಕಲಿಸಿದ ಗುರುಗಳ ಬಗ್ಗೆ 'ಅಟ್ಯಾಚ್ಮೆಂಟ್' ಇತ್ತು.. ಗುರುಶಿಷ್ಯ ಸಂಬಂಧವೂ ಬದಲಾಗಿದೆ. ಮೊದಲು ಶಿಕ್ಷಕರ ಬಗ್ಗೆ ಭಯ ಮತ್ತು ಪ್ರೀತಿಯಿತ್ತು. ಇಂದು ಸ್ನೇಹವಿದೆ. ಹೊಡೆದು ನಮ್ಮ ಮಕ್ಕಳಿಗೆ ಪಾಠ ಕಲಿಸಿ ಎಂದು ಮೊದಲು ಪಾಲಕರೂ ಹೇಳುತ್ತಿದ್ದರು. ಇಂದಿನ ಸಂದರ್ಭ, ಸಮಯ ಹಾಗೂ ವಾತಾವರಣ ತುಂಬಾ ಬದಲಾಗಿದೆ ಎನ್ನುತ್ತಾರೆ ದೊಡ್ಡಗೌಡರು.

ಸೋಲು ಕಲಿಸಿತು ಓದು
ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಾಗ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಪುಸ್ತಕದ ಮೊರೆ ಹೋದರು. ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಅವರ ಇಷ್ಟದ ಸಾಹಿತಿ. ಆವರಣ ಕಾದಂಬರಿಯನ್ನು ಒಂದೇ ಗುಟುಕಿನಲ್ಲಿ ಓದಿ ಮುಗಿಸಿದೆ ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.

ಮನೆತನದ ಮೇಲಿದೆ; ಅಜ್ಜನ ಕೃಪೆ
ಚನ್ನಮ್ಮನ ಕಿತ್ತೂರು: ವಾಕ್ಯಸಿದ್ಧಿ ಪಡೆದಿದ್ದ ದಾರ್ಶನಿಕ ಮತ್ತು ನೇರ ಮಾತನ್ನಾಡುವ ಪ್ರಖರ ಸನ್ಯಾಸಿಯಾಗಿದ್ದ ದೇವರಕೊಂಡ ಅಜ್ಜನ ಘನಕೃಪೆ ದೊಡ್ಡಗೌಡರ ಮನೆತನ ಮೇಲಿದೆ ಎನ್ನುತ್ತಾರೆ ಅವರ ಹಿರಿಯರು.
ಅಜ್ಜ ಹೇಳಿದ್ದು ಹುಸಿಯಾಗುತ್ತಿರಲಿಲ್ಲ. ಆತ ಕೊಟ್ಟರೆ ವರ, ಇಟ್ಟರೆ ಶಾಪವಾಗಿತ್ತು. ಗ್ರಾಮ್ಯ ಭಾμÉ ಅಜ್ಜನ ಅಂತರಂಗದ ಶಕ್ತಿಯಾಗಿತ್ತು.  ಆತನ ಬಾಯಿಯಿಂದ ಬಂದ ಮಾತು ಕೆಲವರಿಗೆ ಇನ್ನೂ ಶಾಪವಾಗಿದೆ. ಹಲವಾರು ಜನರಿಗೆ ವರವೂ ಆಗಿದೆ. ಆತ ಸಿಡಿಲು ಸನ್ಯಾಸಿಯಾಗಿದ್ದ ಎಂದು ಈಗಲೂ ಸ್ಮರಿಸುತ್ತಾರೆ ಶಾಸಕ ಮಹಾಂತೇಶ ದೊಡ್ಡಗೌಡರ.
ಈ ಅಜ್ಜನ ಮಹಾಶೀರ್ವಾದ ದೊಡ್ಡಗೌಡರ ಮನೆತನದ ಮೇಲಿದೆ. ಅಜ್ಜನ ಕರುಣೆ ನಮ್ಮ ಮನೆತನವನ್ನು ಸದಾಕಾಲ ಕಾಯುತ್ತ ಬಂದಿದೆ ಎನ್ನುತ್ತಾರೆ ಅವರು..
ಸಾಧು, ಸಂತರು, ಸ್ವಾಮೀಜಿಯವರ ಬಗ್ಗೆ ಗೌರವ ಹೊಂದಿರುವ ಮನೆತನ ನಮ್ಮದು. ಇಂಚಲ, ನಾಗನೂರು, ಸೇರಿದಂತೆ ನಾಡಿನ ಹಲವಾರು ಮಠ-ಮಾನ್ಯಗಳಿಗೆ ಅವರ ನಿμÉ್ಠಯಿದೆ. ಮನೆತನದ ಭಕ್ತಿಯಿಂದಾಗಿಯೇ ನಾಡಿನ ಪ್ರಮುಖ ಮಠಗಳ 70 ಸ್ವಾಮೀಜಿಗಳು ದೊಡ್ಡಗೌಡರ ಅವರ 49ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರನ್ನು ಮತ್ತು ನಾಡಿನ ಜನರನ್ನು ಆಶೀರ್ವದಿಸಲಿದ್ದಾರೆ.

ಉತ್ತಮ ಬ್ಯಾಟ್ಸಮನ್ ಆಗಿದ್ದೆ
ಕಾಲೇಜು ದಿನಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ. ಕ್ರಿಕೆಟ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೆ. ಉತ್ತಮ ಬ್ಯಾಟ್ಸಮನ್ ಆಗಿದ್ದೆ. ವಿಕೆಟ್ ತೆಗೆಯಲು ವಿರೋಧಿಗಳು ಹರಸಾಹಸ ಪಡುತ್ತಿದ್ದರು ಎಂದು ಕಾಲೇಜು ದಿನಗಳ ಆಸಕ್ತಿದಾಯಕ ಆಟವನ್ನು ಸ್ಮರಿಸಿಕೊಂಡರು. ಮೊನ್ನೆ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಡಿ. ಬಿ. ಇನಾಂದಾರ್ ಅವರನ್ನು 30ಸಾವಿರಕ್ಕೂ ಅಧಿಕ ಮತಗಳಿಂದ ಪರಾಭಗೊಳಿಸಿದ್ದಾರೆ. ಕಿತ್ತೂರು ಕ್ಷೇತ್ರದ ಚುನಾವಣೆ ರಾಜಕೀಯದಲ್ಲಿ ಇದೊಂದು ದಾಖಲೆಯಾಗಿದೆ.ಇಷ್ಟು  ಅಧಿಕ ಮತಗಳ ಅಂತರದಿಂದ ಯಾರೂ ಇಲ್ಲಿಯವರೆಗೆ ಆಯ್ಕೆಯಾಗಿರಲಿಲ್ಲ. 'ಚುನಾವಣೆ ರಾಜಕೀಯದಾಟ'ದಲ್ಲೂ ಇವರನ್ನು ಪರಾಭವಗೊಳಿಸುವುದು ಕಠಿಣವಾಗಲಿದೆ ಎನ್ನುತ್ತಾರೆ ಅಭಿಮಾನಿಗಳು.




 

0/Post a Comment/Comments