ಶಿಲೇದಾರ ಜನ್ಮದಿನ: ಅದ್ಧೂರಿ ಆಚರಣೆಗೆ ನಿರ್ಧಾರ - Kittur

ಶಿಲೇದಾರ ಜನ್ಮದಿನ: ಅದ್ಧೂರಿ ಆಚರಣೆಗೆ ನಿರ್ಧಾರ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕಾಂಗ್ರೆಸ್ ಮುಖಂಡ, ಸಮಾಜ ಸೇವಕ ಹಬೀಬ ಶಿಲೇದಾರ ಅವರ ಜನ್ಮದಿನವನ್ನು ಸೆ. 10 ರಂದು ಅದ್ಧೂರಿಯಾಗಿ   ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅವರ ಅಭಿಮಾನಿ ಬಳಗ ಅಂಬಡಗಟ್ಟಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ನಿರ್ಧರಿಸಿದೆ.

ಜನ್ಮದಿನದ ಅಂಗವಾಗಿ ಕೃಷಿ, ಆರೋಗ್ಯ, ಶಿಕ್ಷಣ, ಕ್ರೀಡೆ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 75 ಸಾಧಕರನ್ನು ಸನ್ಮಾನಿಸಲಾಗುವುದು. ಸತೀಶಣ್ಣಾ ಕಲ್ಯಾಣ ಮಂಟಪದಲ್ಲಿ ಇಲ್ಲಿಯವರೆಗೆ ವಿವಾಹ ಮಾಡಿಕೊಂಡ ದಂಪತಿಗಳನ್ನು ಆಹ್ವಾನಿಸಿ ಗೌರವಿಸಲಾಗುವುದು. ಅವರಲ್ಲಿ 10  ಜೋಡಿಗಳಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ನಿರ್ಧರಿಸಲಾಯಿತು. 

ಕಿತ್ತೂರು ವಿಧಾನಸಭೆ ಕ್ಷೇತ್ರದ 98 ಹಳ್ಳಿಗಳಲ್ಲೂ ಜನ್ಮದಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆ ದಿನ ಕಿತ್ತೂರಿನ ಚನ್ನಮ್ಮ ವರ್ತುಲದಿಂದ ಅಂಬಡಗಟ್ಟಿ ವರೆಗೆ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗುವುದು. ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಅಭಿಮಾನಿಗಳ ಸ್ವಯಂ ಪ್ರೇರಣೆಯಿಂದ ರೋಗಿಗಳಿಗೆ ಹಣ್ಣ-ಹಂಪಲ ನೀಡಲಿದ್ದಾರೆ. ನೇತ್ರ ತಪಾಸಣೆ, ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗುವುದು  ಎಂದು ಅಭಿಮಾನಿ ಮೂಲಗಳು ತಿಳಿಸಿವೆ.

ನಾಡಿನ    ಮಠಾಧೀಶರು, ಮೌಲಾನಾಗಳು,  ಪಾದ್ರಿಗಳು, ಶಾಸಕರಾದ ಸತೀಶ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ್, ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕರಾದ ಡಿ. ಬಿ. ಇನಾಮದಾರ, ವೀರಕುಮಾರ ಪಾಟೀಲ ಸೇರಿ ಅನೇಕ ಗಣ್ಯರು  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕ್ರಾಂತಿಕಾರಿ ಭಾಷಣಕಾರ ನಿಕೇತ್‍ರಾಜ್ ಮೌರ್ಯ ಹಾಗೂ ಘಜಲ್ ಕವಿ ಅಲ್ಲಾ ಗಿರಿರಾಜ ಉಪನ್ಯಾಸ ನೀಡುವರು. ಜಿ ಟಿವಿ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಮೂಲಗಳು ಹೇಳಿವೆ.

ಚಂದ್ರಕಾಂತ ಕಾದ್ರೊಳ್ಳಿ, ಪುಂಡಲೀಕ ನೀರಲಕಟ್ಟಿ, ವಿಜಯಕುಮಾರ ಶಿಂಧೆ, ಅಬ್ದುಲ್ ಮುಲ್ಲಾ, ಬಾಬಾಜಾನ್ ಬೆಳವಡಿ,  ಸಿದ್ರಾಮ ಅಪ್ಪೋಜಿ, ಸುನೀಲ ಸಂಬಣ್ಣವರ, ತೈಪೂರ ಉಡಕೇರಿ,  ಮಡಿವಾಳಯ್ಯ ಗುರುವಯ್ಯವನರ, ಚಂದ್ರು ಮಾಳಗಿ, ಅದೃಶ್ಯ ತುರಮರಿ,  ಮಕ್ಬುಲ್ ಸನದಿ, ಸಂಗಮ ಹೊಸಮನಿ ಇದ್ದರು.