ಸೇನಾನಿ ರುದ್ರಪ್ಪ ಅವರಿಗೆ ಸಂಭ್ರಮದ ಸ್ವಾಗತ - Kittur

ಸೇನಾನಿ ರುದ್ರಪ್ಪ ಅವರಿಗೆ ಸಂಭ್ರಮದ ಸ್ವಾಗತ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: 24 ವರ್ಷಗಳವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಶನಿವಾರ ತವರು ನೆಲಕ್ಕೆ ಆಗಮಿಸಿದ  ದೇಗುಲಹಳ್ಳಿ ಗ್ರಾಮದ ಸೇನಾನಿ ರುದ್ರಪ್ಪ ನಾಯ್ಕರ ಅವರಿಗೆ ಸ್ಥಳೀಯ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ ಹಾಗೂ ಗ್ರಾಮಸ್ಥರ ಪರವಾಗಿ ಸಂಭ್ರಮದ ಸ್ವಾಗತ ಕೋರಲಾಯಿತು. 

ಚನ್ನಮ್ಮನ ವರ್ತುಲದಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡ ಮುಖಂಡರು ಅವರನ್ನು ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ವರೆಗೂ  ತರಬೇತಿ ಪಡೆಯುತ್ತಿರುವ ಯುವಕರು, ಪ್ರಮುಖರು ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು.

ರಸ್ತೆಯುದ್ದಕ್ಕೂ ದೇಶಾಭಿಮಾನ ಸಾರುವ ಘೋಷಣೆಗಳನ್ನು ಮೊಳಗಿಸಿದರು. ನಂತರ ಸೇನಾನಿ ರುದ್ರಪ್ಪ ಮಾತನಾಡಿ, ಸೇನೆಯಲ್ಲಿ ನಿರ್ವಹಿಸಿದ ಕಾರ್ಯ ಹಾಗೂ ಕೆಲವು ಘಟನೆಗಳನ್ನು ಅವರು ಹಂಚಿಕೊಂಡರು.

ಯೋಧ  ರುದ್ರಪ್ಪ  ಅವರನ್ನು ಬರಮಾಡಿಕೊಂಡು ನಿವೃತ್ತ ಸೇನಾಧಿಕಾರಿ ಪರ್ವೇಜ್ ಹವಾಲ್ದಾರ್ ಹಾಗೂ ಶಿಕ್ಷಕ ಬಸವರಾಜ ಗಡೆನ್ನವರ ಮಾತನಾಡಿದರು. 

ಪ್ರಶಾಂತ ಜೋರಾಪುರ,  ವಿಜಯ ಅಂಕಲಗಿಮಠ,  ಬಸವರಾಜ ಎಮ್ಮಿ, ಪರಶುರಾಮ ಪೋಳ, ಬಸವರಾಜ ನಾಯ್ಕರ, ಸಂಗಮೇಶ ಹಿರೇಮಠ,  ನಾಗೇಶ ಮರೆಪ್ಪಗೊಳ, ಹಸನಸಾಬ ಗೋಕಾಕ, ಅಜ್ಜಪ್ಪ ತಳವಾರ, ಸಾದಿಕ್ ಮಕಾನದಾರ, ದೀಪಾ ಹತ್ತಿ, ಕಾವ್ಯ ಕಂಬಾರ, ದೈಹಿಕ ತರಬೇತುದಾರ ತಕ್ವೀಮ ಗೋಕಾಕ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.