ಮನೆ ಬಿದ್ದ ಕುಟುಂಬಗಳಿಗೆ ಪರಿಹಾರ ನೀಡಿ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಅತಿವೃಷ್ಟಿಯಿಂದಾಗಿ ತಾಲ್ಲೂಕಿನ ಎಂ. ಕೆ. ಹುಬ್ಬಳ್ಳಿ ಪಟ್ಟಣದಲ್ಲಿ ಬಿದ್ದಿರುವ 47 ಮನೆಗಳ ಸಮರ್ಪಕ ಸಮೀಕ್ಷೆ ನಡೆಸಬೇಕು. ಆ ಕುಟುಂಬಗಳಿಗೆ ಮನೆ ಪುನರ್ ನಿರ್ಮಿಸಿಕೊಳ್ಳಲು ಶೀಘ್ರ ಪರಿಹಾರ ಧನ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಎಂ. ಕೆ. ಹುಬ್ಬಳ್ಳಿಯಲ್ಲಿ ಬಿದ್ದಿರುವ ಕೆಲವು ಮನೆಗಳ ಸಮೀಕ್ಷೆಯನ್ನು ಸರಿಯಾಗಿ ಮಾಡಿಲ್ಲ ಎಂದು ಆರೋಪಿಸಿದ ಅವರು, ಸಮೀಕ್ಷೆ ಸಮರ್ಪಕ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಿ ಹೇಳಿದರು.
ರಾಜಶೇಖರ ಹಿಂಡಲಗಿ, ಮಲ್ಲವ್ವ ಕೋಲಕಾರ, ಶಶಿಕಲಾ ಚಲವಾದಿ, ಶಿವಪ್ಪ ಪಾಗಾದ, ಮೆಹಬೂಬಸಾಬ ಬಾಗವಾನ, ಸುನೀತ ಚಲವಾದಿ, ಜಾಫರ್ ಹುಬ್ಬಳ್ಳಿ, ಪ್ರಾಣೇಶ ಕೊಡ್ಲಿ, ನಾಗಪ್ಪ ಗೋಣಿ ಉಪಸ್ಥಿತರಿದ್ದರು.
Post a Comment