ಶಾಲು, ಹಾರ ಬೇಡ: ದೊಡ್ಡಗೌಡರ ಪುನರುಚ್ಛಾರ - Kittur

ಶಾಲು, ಹಾರ ಬೇಡ: ದೊಡ್ಡಗೌಡರ ಪುನರುಚ್ಛಾರ

ಪ್ರೆಸ್‍ಕ್ಲಬ್ ವಾರ್ತೆ

ಎಂ. ಕೆ. ಹುಬ್ಬಳ್ಳಿ:    ಎಂ. ಕೆ. ಹುಬ್ಬಳ್ಳಿಯ ಹೊರವಲಯದಲ್ಲಿ ಗೆಳೆಯರ ಬಳಗ ಸೆ. 2 ರಂದು ಹಮ್ಮಿಕೊಂಡಿರುವ ಜನ್ಮದಿನದಂದು ಶಾಲು, ಮಾಲೆ ಹಾಗೂ ಕಟ್ ಮಾಡಲು ಕೇಕ್ ಅನ್ನು ಯಾರೂ ತರುವುದು ಬೇಡ..

ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಹೀಗೆ ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡಿದರು.

ಸೋಮವಾರ ಮಾಧ್ಯಮದವರೊಂದಿಗೆ ಜನ್ಮದಿನದ ಅಂಗವಾಗಿ ಗೆಳೆಯರ ಬಳಗದವರು ದಿವಂಗತ ಬಸವಂತರಾಯ ದೊಡ್ಡಗೌಡರ ಫೌಂಡೇಶನ್ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದಾರೆ. ವಿವಿಧ ಆಸ್ಪತ್ರೆಗಳ ಹಿರಿಯ ತಜ್ಞ ವೈದ್ಯರು ಈ ಶಿಬಿರದಲ್ಲಿ ಭಾಗವಹಿಸಿ ಪರೀಕ್ಷೆ ನಡೆಸಲಿದ್ದಾರೆ. ಇದರ ಸದುಪಯೋಗವನ್ನು ಹೆಚ್ಚು ಜನರು ಪಡೆದರೆ ನನಗೆ ಸಂತೋಷ ಆಗುತ್ತದೆ ಎಂದು ನುಡಿದರು.

8 ಜನರಿಂದ ಅಂಗಾಂಗ ದಾನ

ಜನ್ಮ ದಿನಾಚಾರಣೆ ಅಂಗವಾಗಿ 8 ಜನರು ಮರಣೋತ್ತರವಾಗಿ ಕಣ್ಣು, ಕಿಡ್ನಿ, ಚರ್ಮ ಸೇರಿ ವಿವಿಧ ಅಂಗಗಳನ್ನು ದಾನ ಮಾಡುವುದಾಗಿ ಈಗಾಗಲೇ ವಾಗ್ದಾನ ಮಾಡಿದ್ದಾರೆ ಎಂದು ದೊಡ್ಡಗೌಡರ ಮಾಹಿತಿ ನೀಡಿದರು.

ನನ್ನ ಮೇಲೆ ಅಭಿಮಾನವಿಟ್ಟು ಕಿತ್ತೂರು ಶಾಸಕನನ್ನಾಗಿ ಆಯ್ಕೆ ಮಾಡಿದ ನಂತರ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆ ಈಡೇರಿಸಲು ಹೆಚ್ಚು ಶ್ರಮಿಸಿದ್ದೇನೆ. ಕಿತ್ತೂರು ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಎರಡು ಯೋಜನೆಗೆ ಒಪ್ಪಿಗೆ ದೊರಕಿದೆ. ರಾಣಿ ಚನ್ನಮ್ಮನ ಅರಮನೆ ಪುನರ್ ಸೃಷ್ಟಿಗೆ ನಿವೇಶನ ಗುರುತಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ದೊರಕಿದೆ. ಅನೇಕ ಜನಹಿತ ಕೆಲಸಗಳಲ್ಲಿ ಕೆಲವು ಮುಗಿದಿವೆ. ಮತ್ತೆ ಕೆಲವು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ದಿವಂಗತ ಬಸವಂತರಾಯ ದೊಡ್ಡಗೌಡರ ಫೌಂಡೇಶನ್   ಪರವಾಗಿ ಇಂದಿನ ಯುವಕರನ್ನು ಆಧುನಿಕ ಜಗತ್ತಿಗೆ ತಕ್ಕಂತೆ ರೂಪಿಸುವ ಸಲುವಾಗಿ ಮತ್ತು ಐಎಎಸ್, ಕೆಎಎಸ್, ಪಿಎಸ್‍ಐ ಸೇರಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು  ಉಚಿತ ತರಬೇತಿ ಮೂಲಕ ಅವರನ್ನು ಸಜ್ಜುಗೊಳಿಸಲಾಗುತ್ತಿದೆ. ಈಗಾಗಲೇ 120 ವಿದ್ಯಾರ್ಥಿಗಳು ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಚಿದರು.

‘ಆಧಾರ ಕಾರ್ಡ್ ತನ್ನಿ'

ಎಂ. ಕೆ. ಹುಬ್ಬಳ್ಳಿ: ಜನ್ಮದಿನ ನಿಮಿತ್ತ ಕ್ಷೇತ್ರಾದ್ಯಂತ ಆಗಮಿಸುವ ಅಭಿಮಾನಿಗಳು ಮತ್ತು ಸಾರ್ವಜನಿಕರು ಬರುವಾಗ ಆದಾರ ಕಾರ್ಡ್ ಜತೆಗೆ ತನ್ನಿ. ಅವರಿಗೆ ಆರೋಗ್ಯ ತಪಾಸಣೆಯ ಆಯುಷ್ಮಾನ್ ಭಾರತ ಯೋಜನೆಯ ಆರೋಗ್ಯ ಕಾರ್ಡ್ ಉಚಿತವಾಗಿ ವಿತರಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.