ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸೆ. 2 ರಂದು ಹಮ್ಮಿಕೊಂಡಿರುವ ಶಾಸಕ ಮಹಾಂತೇಶ ದೊಡ್ಡಗೌಡರ ಜನ್ಮದಿನದಂದು ಅವರ ಅಭಿಮಾನಿಗಳು 'ಜನಶಕ್ತಿ ಪ್ರದರ್ಶನ'ಕ್ಕೆ ಮುಂದಾಗಿದ್ದಾರೆ. ತಾಲೂಕಿನ ಎಂ. ಕೆ. ಹುಬ್ಬಳ್ಳಿಯ ಹೊರವಲಯದಲ್ಲಿರುವ ನಿವೇಶನವನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅದನ್ನು ಸ್ವಚ್ಛಗೊಳಿಸುವುದು ಹಾಗೂ ಶಾಮಿಯಾನ್ ಹಾಕಿಸುವ ಕಾರ್ಯ ಭರದಿಂದ ಸಾಗಿದೆ.
ಸುಮಾರು 25 ಎಕರೆ ಪ್ರದೇಶವನ್ನು ಕಾರ್ಯಕ್ರಮಕ್ಕಾಗಿ ಅಭಿಮಾನಿಗಳು ಗುರುತಿಸಿದ್ದಾರೆ. ಬೃಹತ್ ವಾಟರ್ ಪ್ರೂಫ್ ಶಾಮಿಯಾನ ಅಲ್ಲಿ ತಲೆ ಎತ್ತಲಿದೆ. ವಾಹನ ಪಾರ್ಕಿಂಗ್, ಬೃಹತ್ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ಒಂದೇ ಕಡೆ ಆಯೋಜಿಸಲಾಗುತ್ತಿದೆ. ಬಂದ ಜನರಿಗೆ ವಿವಿಧ ಖಾದ್ಯಗಳನ್ನೊಳಗೊಂಡ ರುಚಿಕರ ಊಟ ಬಡಿಸಲು ಮೆನು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾರ, ತುರಾಯಿ ಬೇಡ
ಜನ್ಮದಿನ ಆಚರಣೆಯಂದು ಅಭಿಮಾನಿಗಳು ಹಾರ, ತುರಾಯಿ, ಶಾಲು ತರಬಾರದು. ಅವರ ಪ್ರೀತಿಯ ಹಾರೈಕೆ ಇದ್ದರೆ ಸಾಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ವಿನಮ್ರವಾಗಿ ಕೋರಿದ್ದಾರೆ.
ಈ ಕೋರಿಕೆಯನ್ನು ಅಭಿಮಾನಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ.