ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಣೆ - Kittur

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಆಚರಣೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಪರವಾಗಿ  ಇತ್ತೀಚೆಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಸಂಗೊಳ್ಳಿ  ರಾಯಣ್ಣನ ಜನ್ಮದಿನ ಆಚರಿಸಲಾಯಿತು.

ಇದರ ಅಂಗವಾಗಿ ರಾಯಣ್ಣನ ಆಳೆತ್ತರದ ಭಾವಚಿತ್ರದ ಮೆರವಣಿಗೆ ನಡೆಯಿತು. ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದಿಂದ ಆರಂಭಗೊಂಡ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ ಬಳಿಯ ಚನ್ನಮ್ಮ ವರ್ತುಲದ ಮಾರ್ಗವಾಗಿ ಹಾಯ್ದು ಕೋಟೆ ಆವರಣಕ್ಕೆ ಬಂದು ಮುಕ್ತಾಯವಾಯಿತು.

ಯುವ ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸನ್ನವರ ನೇತೃತ್ವ ವಹಿಸಿದ್ದರು.  ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಚಂದ್ರಯ್ಯ ಮುರಗೋಡಮಠ, ಕಿರಣ ಆದಮನಿ, ಶಿವಾನಂದ ಮುರಗೋಡಮಠ, ಸಂತೋಷ ಪೂಜೇರ, ಪ್ರಕಾಶ ಅವರಾದಿ, ಅಭಿಷೇಕ ವರಗನ್ನವರ, ರವಿ ದ್ಯಾಮನವರ, ಉಮೇಶ ವರಗನ್ನವರ, ಬಸವರಾಜ ಅಂಗಡಿ, ಸಂತೋಷ ವರಗನ್ನವರ, ರಾಜು ನಾವಲಗಿ, ಪ್ರಕಾಶ ಕಡೇಮನಿ, ಯಲ್ಲಪ್ಪ ವರಗನ್ನವರ, ದಯಾನಂದ ವರಗನ್ನವರ, ಶಿವಾನಂದ ಚಿಕ್ಕಮಠ, ಬಸವರಾಜ ವರಗನ್ನವರ, ಗಂಗಪ್ಪ ವಕ್ಕುಂದ, ಕುಮಾರ ಆಡಿನವರ, ಸತೀಶ ನಾಯ್ಕರ, ಮಂಜು ವರಗನ್ನವರ, ರಾಮಪ್ಪ ಧರೆಣ್ಣವರ, ಶಂಕರ ಹಳೇಮನಿ, ವಿಠ್ಠಲ ಧರೆಣ್ಣವರ, ಪ್ರವೀಣ ಚಿನಗುಡಿ, ಶ್ರೀಧರ ವರಗನ್ನವರ, ಮಂಜುನಾಥ ವಕ್ಕುಂದ, ಈರಣ್ಣ ವರಗನ್ನವರ, ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.  

0/Post a Comment/Comments