ಮಂಜುನಾಥ ಕಲಾಲ ಅಕಾಲಿಕ ನಿಧನ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪಟ್ಟಣದ ಕ್ರಿಯಾಶೀಲ ಯುವಕ, ಜಾತಿ,ಮತ, ಪಂಥ, ಪಂಗಡ ಮೀರಿ ಬೆಳೆದಿದ್ದ, ಸರ್ವಧರ್ಮಗಳ ಮಧ್ಯೆ ಸೌಹಾರ್ದದ ಸೇತುವೆಯಂತಿದ್ದ ಮಂಜುನಾಥ ವಿಷ್ಣು ಕಲಾಲ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಅವರಿಗೆ 42 ವಯಸ್ಸಾಗಿತ್ತು.
ಮೃತರು ತಂದೆ, ತಾಯಿ, ಪತ್ನಿ, ಪುತ್ರಿ, ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯ ಬಂಧು, ಮಿತ್ರರನ್ನು ಅಗಲಿದ್ದಾರೆ.
ಆರೋಗ್ಯವಂತರಾಗಿದ್ದ ಅವರು ‘ವಾಶ್ ರೂಂ'ನಲ್ಲಿ ಬಿದ್ದಿದ್ದೇ ನೆಪವಾಯಿತು. ತಲೆಬುರುಡೆಯಲ್ಲಿ ಐದು ಕಡೆ ಕೂದಲೆಳೆಯ ಬಿರುಕು ಬಿಟ್ಟಿತ್ತು ಎಂದು ವೈದ್ಯರುಗಳ ಪರೀಕ್ಷೆಯಿಂದ ಗೊತ್ತಾಯಿತು ಎಂಬುದು ಕುಟುಂಬದವರ ಮಾತು.
ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಿದ್ದ ಪ್ರಯತ್ನಗಳನ್ನೆಲ್ಲ ವೈದ್ಯರು ಮತ್ತು ಕುಟುಂಬದವರು ಮಾಡಿದರು. ಸುಮಾರು ಐದು ದಿನಗಳ ವರೆಗೆ ಸಾವು-ಬದುಕಿನ ಮಧ್ಯೆ ಹೋರಾಡಿದರು. ಕೊನೆಗೆ ವಿಧಿಯೇ ಜಯಿಸಿತು. ಕ್ರಿಯಾಶೀಲ ಮತ್ತು ಸಾತ್ವಿಕ ಗೆಳೆಯನನ್ನು ಸಾವು ತನ್ನಡೆಗೆ ಸೆಳೆದುಕೊಂಡಿತು.
ಈ ಅಕಾಲಿಕ ಸಾವು ಅವರ ಕುಟುಂಬದವರ ಜೊತೆಗೆ ಗೆಳೆಯರು, ಪರಿಚಿತರಲ್ಲಿ ತುಂಬಾ ನೋವು ತಂದಿದೆ. ಇನ್ನಷ್ಟು ದಿನ ಎಲ್ಲರ ಜೊತೆಗಿದ್ದು ನಲಿಯಬೇಕಿದ್ದ ಆತ್ಮೀಯ ಜೀವವೊಂದು ಬಾರದ ಲೋಕಕ್ಕೆ ಹಾರಿ ಹೋಗಿದೆ. ವಿಷಾದ ಎಲ್ಲರ ಮನದಲ್ಲೂ ಮಡುಗಟ್ಟಿ ನಿಂತಿದೆ. We miss you Manju..
Post a Comment