ಸರಳತೆ ಮೆರೆದ ಎಂಎಲ್‍ಸಿ ನಾಗರಾಜ್ ಯಾದವ್ - Belagavi




 ಸರಳತೆ ಮೆರೆದ ಎಂಎಲ್‍ಸಿ ನಾಗರಾಜ್ ಯಾದವ್

ಪ್ರೆಸ್‍ಕ್ಲಬ್ ವಾರ್ತೆ

ಬೆಳಗಾವಿ: ಶಾಸಕರು, ಮಂತ್ರಿಗಳೆಂದರೆ ಕಣ್ಮುಂದೆ ಬರುವುದು ಹಡಗಿನಂಥ ದೊಡ್ಡ ಕಾರು, ಹಿಂದೆ ಬೆಂಬಲಿಗರ ವಾಹನಗಳ ದಂಡು, ಕೆಳಗಿಳಿದರೆ ಸಾಕು ಅಧಿಕಾರಿಗಳ ಸೆಲ್ಯೂಟ್, ಕೈ ಕುಲುಕಲು ಮುಗಿಬೀಳುವ ಕಾರ್ಯಕರ್ತರು, ಮಾತನಾಡಲು ಹಂಬಲಿಸುವ ಸಾರ್ವಜನಿಕರು..

ಈಗಿರುವ ವಿಧಾನಸಭೆ, ಪರಿಷತ್ ಸದಸ್ಯರು ಮತ್ತು ಮಂತ್ರಿಗಳ ಈ ದರ್ಬಾರು ನೋಡಿದರೆ ರಸ್ತೆ ಬದಿಗೆ ನಿಂತು ನೋಡುವ ಬಡವನಿಗೆ  'ಇಂದ್ರನ ದರ್ಬಾರವಿದು' ಎಂದು ಕ್ಷಣ ಕಾಲ ಅನ್ನಿಸದೆ ಇರದು!

ಶ್ರೀಸಾಮಾನ್ಯ ಈ ರೀತಿ ಭಾವಿಸಿದರೆ, ಇದನ್ನೆಲ್ಲ ಸ್ವತಃ ಅನುಭವಿಸುವ ಕೆಲ ರಾಜಕಾರಣಿಗಳಿಗೆ ಹೇಗೆ ಅನ್ನಿಸಬೇಡ? 

ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತಿಗೆ ಇತ್ತೀಚೆಗೆ ಆಯ್ಕೆಯಾದವರು. ಅವರ ಹೆಸರು ನಾಗರಾಜ್ ಯಾದವ್. ಕುಂದಾನಗರಿ ಬೆಳಗಾವಿ ಜಿಲ್ಲೆಯ ಅಳಿಯ ಕೂಡಾ ಅವರು. ಹೀಗಾಗಿ ಬೆಳಗಾವಿ ಎಂದರೆ ಇನ್ನಿಲ್ಲದ ಪ್ರೀತಿ ಅವರಿಗೆ. ಮೊನ್ನೆ ಇಲ್ಲಿಗೆ ಬಂದಿದ್ದ ಅವರು ಸಾರಿಗೆ ಬಸ್ ಏರಿ ಬೆಂಗಳೂರಿಗೆ ತೆರಳಿದರು. ಸರಳತೆ ಈ ವ್ಯಕ್ತಿಯ ಬದುಕಿನ ಉಸಿರು. ಆಸ್ತಿವಂತನಾಗಿದ್ದರೂ ಸರಳತೆಯನ್ನು ಮೈಗೂಡಿಸಿ ಕೊಂಡಿರುವ ಅವರದು ಅಪರೂಪದ ವ್ಯಕ್ತಿತ್ವ.

ಪ್ರಖರ ವಾಗ್ಮಿ

ನಾಗರಾಜ್ ಅವರು ಕೆಪಿಸಿಸಿ ವಕ್ತಾರರೂ ಹೌದು. ಅರಳು ಹುರಿದಂತೆ ಮಾತನಾಡುತ್ತಾರೆ. ಪಕ್ಷದ ವಿಚಾರ ಮಂಡಿಸುವುದರಲ್ಲಿ ಅವರ ಪ್ರಖರತೆ ಅಪ್ರತಿಮವಾದದ್ದು. ಪೆನಲ್ ಚರ್ಚೆಯಲ್ಲಿ ಭಾಗವಹಿಸಿದ್ದಾಗ ಅವರ ವಾಗ್ಝರಿಯನ್ನು ನೀವೂ ಒಮ್ಮೆ ನೋಡಿ..

0/Post a Comment/Comments