ಅಮೃತ ಮಹೋತ್ಸವ: 75 ಹಿರಿಯರಿಗೆ ಸತ್ಕಾರ - Kittur




 ಅಮೃತ ಮಹೋತ್ಸವ: 75 ಹಿರಿಯರಿಗೆ ಸತ್ಕಾರ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ತಾಲೂಕಿನ ಕತ್ರಿದಡ್ಡಿ ಗ್ರಾಮದ ಪ್ರೌಢಶಾಲೆಯಲ್ಲಿ ಸೋಮವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರ ಮನೆ ಮಾಡಿತ್ತು. ಧ್ವಜಾರೋಹಣ ಸೇರಿ  ವಿವಿಧ  ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 75 ಹಿರಿಯ ನಾಗರಿಕರಿಗೆ ಮತ್ತು ನಿವೃತ್ತ ಮಿಲಿಟರಿ ಸೇನಾನಿಗಳಿಗೆ ಸತ್ಕರಿಸಿ ಗೌರವ ಸಲ್ಲಿಸಲಾಯಿತು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿಷ್ಟಪ್ಪ ಶಿಂಧೆ, ಉಪಾದ್ಯಕ್ಷೆ ಮಂಜುಳಾ ಮಡಿವಾಳರ, ಸದಸ್ಯರಾದ ಮಹಾಂತೇಶ ಎಮ್ಮಿ, ದಶರಥ ಮಡಿವಾಳರ, ಎಸ್‍ಡಿಎಂಸಿ ಅದ್ಯಕ್ಷ ಬಸವರಾಜ ಕುರುಬರ, ಕಾಸೀಮ್ ನೇಸರಗಿ,  ಅರ್ಜುನ ಮಡಿವಾಳರ, ಹುಸೇನ ದೊಡಮನಿ, ಹೊಳೆಪ್ಪ ಪಾಟೀಲ, ಮಾರುತಿ ಹಟ್ಟಿಹೊಳಿ, ಶಿಕ್ಷಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

0/Post a Comment/Comments