ಅವರಾದಿ ಹಿರೇಮಠದಲ್ಲಿ ಗುರುಪೌರ್ಣಿಮೆ ಸಂಭ್ರಮ - Kitturಅವರಾದಿ ಹಿರೇಮಠದಲ್ಲಿ ಗುರುಪೌರ್ಣಿಮೆ ಸಂಭ್ರಮ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸಮಾಜಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡು ಅಜ್ಞಾನ ಮತ್ತು ಅಂಧಕಾರವನ್ನು    ಯಾರು ಹೋಗಲಾಡಿಸುವರೋ ಅಂಥವರಿಗೆ ಗುರು ಎನ್ನಬೇಕು ಎಂದು ನಿಚ್ಚಣಕಿಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಅಭಿಪ್ರಾಯಪಟ್ಟರು. 
ಕಿತ್ತೂರು ತಾಲೂಕಿನ ಅವರಾದಿ ಹಿರೇಮಠದಲ್ಲಿ ಬುಧವಾರ ನಡೆದ ಗುರುಪೌರ್ಣಿಮೆಯ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ಹಾಡಿದ್ದಾರೆ. ಅಂತಹ ಗುರುವಿನ ನಾಮಸ್ಮರಣೆ ಮಾಡಿ ಗುರುವಿನ ಮಾರ್ಗದರ್ಶನದಲ್ಲಿ ಜೀವಿಸುವದು ಮನುಕುಲದ ಆದ್ಯ ಕರ್ತವ್ಯವಾಗಬೇಕು ಎಂದರು.
ದೊಡವಾಡ ಹಿರೇಮಠದ ಜಡಿಶಿದ್ಧೇಶ್ವರ ಶಿವಾಚಾರ್ಯರು, ಗುರು ಎಂದರೆ ಜಗದ ಪರಿವರ್ತನೆಯ ಪ್ರತೀಕ, ಅನ್ನ,ಅಕ್ಷರ, ಜ್ಞಾನವನ್ನು ಕರುಣಿಸಿದ ಗುರುವಿನ ಸೇವೆ ಮಾಡುವ ಸೌಭಾಗ್ಯದ ಸಂಕೇತವೇ ಗುರು ಪೌರ್ಣಿಮೆ ಎಂದರು.
ವೇ.ಮೂ. ಉಳವಯ್ಯ ಸ್ವಾಮೀಜಿ  ಹಿರೇಮಠ ನೇತೃತ್ವ ವಹಿಸಿದ್ದರು. ಪತ್ರೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ಹೋಮ ಪೂಜೆ ಜರುಗಿತು. ಉಳವಪ್ಪ ಬಶೆಟ್ಟಿ, ಬಸಪ್ಪ ಪರವನ್ನವರ, ನಿಂಗಪ್ಪ ಲಕ್ಕುಂಡಿ, ಶಂಭುಲಿಂಗಯ್ಯ ಹಿರೇಮಠ, ಮಹೇಶ ಕಾಡನ್ನವರ, ಶ್ರೀಶೈಲ ಕಲ್ಮಠ, ಮಹೇಶ ಕಟ್ಟಿಮಠ, ರಾಜು ತೊರಗಲ್ಮಠ, ಅಶೋಕ ಹಿರೇಮಠ ಶಂಕರಗೌಡ ಪಾಟೀಲ, ಡಾ. ಚಂದ್ರಶೇಖರ ಪೊಲೀಸ್‍ಪಾಟೀಲ, ನಾಗಯ್ಯಸ್ವಾಮೀಜಿ ಹಿರೇಮಠ, ನೀಲಪ್ಪ ಕರವೀನ ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಪಾಲ್ಗೊಂಡಿದ್ದರು. ವೀರಯ್ಯ ಹಿರೇಮಠ ನಿರೂಪಿಸಿ ವಂದಿಸಿದರು.