ಕೌಶಲ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ - Kittur


ಕೌಶಲ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಆಧುನಿಕ ಸ್ಪರ್ಧಾತ್ಮಕ ಕಾಲದಲ್ಲಿರುವ ವಿದ್ಯಾರ್ಥಿಗಳು ಕೌಶಲ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರಾಚಾರ್ಯ ಡಾ. ಜಿ.ಕೆ. ಭೂಮನಗೌಡರ ಕರೆ ನೀಡಿದರು.  ವಿಶ್ವ ಕೌಶಲ ದಿನಾಚರಣೆ ಅಂಗವಾಗಿ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಕೌಶಲ ತರಬೇತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಯುವಕರಿಗಾಗಿ ಪ್ರಾರಂಭಿಸಿದ್ದಾರೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.  
ಡಾ.ಕೆ.ಆರ್. ಮೆಳವಂಕಿ, ಪ್ರೊ. ಜಿ.ಎಸ್. ಪ್ರಭಯ್ಯನವರಮಠ, ಎಂ.ಜಿ. ಹೀರೆಮಠ, ಡಾ. ಬಿ.ಜಿ. ನಂದನ್, ಪ್ರೊ. ಎ.ಕೆ. ಕರೆಪ್ಪನವರ, ಎಸ್.ಡಿ. ಶಹಪೂರಮಠ ಹಾಗೂ ಪ್ರೊ..ಎಲ್.ಡಿ. ಬಡಿಗೇರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0/Post a Comment/Comments