ಐದು ಕ್ಷೇತ್ರಗಳಲ್ಲಿ ಇದ್ದಾರೆ ‘ಧಣಿ' ಬೆಂಬಲಿಗರು - Kittur


 ಐದು ಕ್ಷೇತ್ರಗಳಲ್ಲಿ ಇದ್ದಾರೆ ‘ಧಣಿ' ಬೆಂಬಲಿಗರು

ಟಿಕೆಟ್ ಕಡೆಗಣಿಸಿದರೆ ಆಗಲಿದೆ ಕಾಂಗ್ರೆಸ್‍ಗೆ ಹಿನ್ನಡೆ!

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಿ. ಬಿ. ಇನಾಮದಾರ ಅವರು ಬರುವ 2023 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ  ಕಿತ್ತೂರು  ಕ್ಷೇತ್ರದಿಂದ ಸ್ಪರ್ಧಿಸುವುದು ಮತ್ತು ಪಕ್ಷವು ಅವರಿಗೆ  ಟಿಕೆಟ್  ನೀಡುವುದು ಖಚಿತವಾಗಿದೆ. ಒಂದು ವೇಳೆ ಪವಾಡ ನಡೆದು ಅವರನ್ನು ಟಿಕೆಟ್ ವಂಚಿತರನ್ನಾಗಿ ಮಾಡಿದರೆ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಶಯವಿದೆ ಎಂಬ ಚರ್ಚೆ ಧಣಿ ಅಭಿಮಾನಿಗಳ ಮಧ್ಯೆ ಈಗ ಶುರುವಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಭದ್ರ ನೆಲೆ ಒದಗಿಸಿದವರು ಇನಾಮದಾರ ಎಂಬುದು ಸುಳ್ಳಲ್ಲ. ಕೇಂದ್ರ ಮಟ್ಟದ ಸರ್ವೋಚ್ಛ ನಾಯಕರಲ್ಲಿಯೂ ಇವರ ಬಗ್ಗೆ ಗೌರವ ಭಾವನೆಯಿದೆ. ರಾಜ್ಯದಲ್ಲಿಯೂ ಅನೇಕ ಹಿರಿಯ  ಮುಖಂಡರು ಇವರನ್ನು ಗೌರವಪೂರ್ವಕವಾಗಿ ‘ನೇಗಿನಹಾಳ ಧಣಿ’ ಎಂದೇ ಸಂಭೋದನೆ ಮಾಡಿ ಮಾತನಾಡಿಸುತ್ತಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿರುವ ವಿಷಯವಾಗಿದೆ ಎನ್ನುತ್ತಾರೆ ಅವರು. 

ಪಕ್ಷ ಮೀರಿಯೂ ಅವರ ಜೊತೆಗೆ ಅವರದೇ ಬೆಂಬಲಿಗರ ಪಡೆಯಿದೆ. ಒಂದು ಕೈ ಸನ್ನೆ ಮಾಡಿದರೆ ಸಾಕು ಸಹಸ್ರಾರು ಮತಗಳ ಏರುಪೇರು ಮಾಡುವ ದೈತ್ಯ ಶಕ್ತಿ ಹೊಂದಿದ್ದಾರೆ. ಪಕ್ಕದ ಕ್ಷೇತ್ರಗಳಾದ ಬೆಳಗಾವಿ ಗ್ರಾಮೀಣ, ಖಾನಾಪುರ, ಬೈಲಹೊಂಗಲ, ಸವದತ್ತಿ ಮತ್ತು ಧಾರವಾಡ ಗ್ರಾಮೀಣ ಭಾಗದಲ್ಲಿ ನೂರಾರು ಜನರು ಇನಾಮದಾರ ಅವರ ರಾಜಕೀಯ ಶೈಲಿ ಮೆಚ್ಚುವ ಬೆಂಬಲಿಗರು ಇದ್ದಾರೆ ಎಂಬ ವಿಷಯವನ್ನು ತಿಳಿಯದವರು ಇಲ್ಲ. 

ಅವರು ರಾಜಕೀಯ ಪ್ರವೇಶ ಮಾಡಿದಾಗ ಜಿಲ್ಲೆಯ ಕೆಲವು ನಾಯಕರು ಮತ್ತು ನಾಯಕಿಯರಿಗೆ ರಾಜಕಾರಣದ ಎಬಿಸಿಡಿಯೂ ಗೊತ್ತಿರಲಿಲ್ಲ. ಅಂಥವರಲ್ಲಿ ಇನಾಮದಾರ ಅವರನ್ನು ರಾಜಕೀಯ ಗುರುವಾಗಿ ಅನೇಕರು ಸ್ವೀಕರಿಸಿದ್ದಾರೆ. ಅವರಲ್ಲಿಯೇ ಒಂದಿಬ್ಬರು ಅವರಿಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರೇನೂ ಇದರಲ್ಲಿ ಯಶಸ್ಸು ಕಾಣುವುದಿಲ್ಲ. ದಕ್ಷ, ನಿಷ್ಠಾವಂತ ಮತ್ತು ಪ್ರಾಮಾಣಿಕ ರಾಜಕಾರಣಿ ಧಣಿಗೆ ಒಂದು ವೇಳೆ ಟಿಕೆಟ್ ತಪ್ಪಿಸಿದರೆ  ಅವರ ಸಾವಿರಾರು ಪಕ್ಷಾತೀತ ಅಭಿಮಾನಿಗಳ ಶಾಪಜ್ವಾಲೆ ಪಕ್ಕದ ಐದು ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ  ಬೀರುವುದು ಬೇಡ ಎಂಬುದು ಪಕ್ಷದ ನಿಷ್ಠರ ಕಳಕಳಿಯಾಗಿದೆ ಎನ್ನುತ್ತಾರೆ ಅಭಿಮಾನಿಗಳು.

0/Post a Comment/Comments