ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪಟ್ಟಣದ ಮುಖ್ಯ ಬೀದಿಯ ಸಿನಿಮಾ ಟಾಕೀಸ್ ಬಳಿಯಿರುವ ಎರಡು ಚಿನ್ನದ ಅಂಗಡಿಗಳಲ್ಲ್ಲಿ ಮಂಗಳವಾರ ಬೆಳಿಗ್ಗೆ ಕಳ್ಳತನ ನಡೆದಿದ್ದು. ಅಂಗಡಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದೊಯ್ಯಲಾಗಿದೆ.
ಮಾರ್ತಾಂಡಪ್ಪ ಪತ್ತಾರ ಹಾಗೂ ನಾರಾಯಣ ಪತ್ತಾರ ಅವರ ಅಂಗಡಿಗಳು ಕಳ್ಳತನವಾಗಿದೆ. ಎರಡೂ ಅಂಗಡಿ ಸೇರಿ 11 ತೊಲೆ ಚಿನ್ನದ ಆಭರಣ, 2.5 ಕೆಜಿ ಬೆಳ್ಳಿ ಆಭರಣಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ.
ಶೆಟರ್ಸ್‍ಗೆ ಅಳವಡಿಸಲಾಗಿರುವ ಲಾಕ್ ಹಾರೆಯಿಂದ ಕಿತ್ತು ಕಳ್ಳರು ಒಳಗೆ ನುಗ್ಗಿದ್ದಾರೆ. ಮಾರ್ತಾಂಡಪ್ಪ ಅವರ ‘ಮಾನಪ್ಪಜ್ಜ' ಅಂಗಡಿಯೊಳಗಿರುವ ಗ್ಲಾಸಿನ ಚೌಕಟ್ಟನ್ನು ಒಡೆದು ಹಾಕಿದ್ದಾರೆ. ಇವರ ಅಂಗಡಿಯಲ್ಲಿಟ್ಟಿದ್ದ 10 ತೊಲೆ ಚಿನ್ನಾಭರಣ, 1.5 ಕೆಜಿ ಬೆಳ್ಳಿ ಆಭರಣ ಹಾಗೂ ನಾರಾಯಣ ಪತ್ತಾರ ಅವರ ‘ಭಾಗ್ಯಶ್ರೀ' ಅಂಗಡಿಯಲ್ಲಿಯ 10 ಗ್ರಾಂ ಚಿನ್ನ ಹಾಗೂ ಒಂದು ಕೆಜಿ ಬೆಳ್ಳಿ ಆಭರಣ ಕದ್ದುಕೊಂಡು ಪರಾರಿಯಾಗಿದ್ದಾರೆ.
ಬೆಳಿಗ್ಗೆ ಸುಮಾರು ಎರಡು ಗಂಟೆಗೆ ಇವೆರಡು ಅಂಗಡಿಗಳಿಗೆ ದಾಳಿಯಿಟ್ಟಿದ್ದ ಐವರು ಜನರಿದ್ದ ಕಳ್ಳರ ತಂಡದವರು, ಶೆಟರ್ಸ್ ಹಾರೆಯಿಂದ ಮೀಟುವಾಗÀ ಎದುರಿಗಿರುವ ಕಲ್ಮಠ ಮನೆಯವರಿಗೆ ಸಪ್ಪಳ ಕೇಳಿ ಬಂದಿದೆ. ಪೊಲೀಸರಿಗೆ ಅವರು ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರನ್ನು ಕಂಡ ಕಳ್ಳರು ಸ್ಥಳದಲ್ಲೇ ಹಾರೆಗಳನ್ನು ಚೆಲ್ಲಿ ಪರಾರಿಯಾಗಿದ್ದಾರೆ.
4 ತಂಡ ರಚನೆ
ಕಳ್ಳರ ಪತ್ತೆಗಾಗಿ ಬೈಲಹೊಂಗಲ ಉಪವಿಭಾಗದಲ್ಲಿ ಬರುವ ಆಯ್ದ ಪೊಲೀಸ್ ಪರಿಣಿತರ 4 ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದರು. ಹೆಚ್ಚುವರಿ ಎಸ್ಪಿ ಮಹಾಲಿಂಗ ನಂದಗಾವಿ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಮಹಾಂತೇಶ ಹೊಸಪೇಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್‍ಐ ದೇವರಾಜ ಉಳ್ಳಾಗಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Post a Comment