ದೊಡ್ಡಗೌಡರ ಗತ್ತು; ಸಿಎಮ್, ಪಿಎಮ್‍ಗೂ ಗೊತ್ತು'
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ವಿರುದ್ಧ ಖಾಸಗಿ ನ್ಯೂಸ್ ಚಾನಲ್‍ಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳಿಂದಾಗಿ ಆಕ್ರೋಶಗೊಂಡಿರುವ ಅವರ ಅಭಿಮಾನಿಗಳು, ‘ದೊಡ್ಡಗೌಡರ ಗತ್ತು: ಸಿಎಮ್ ಮತ್ತು ಪಿಎಮ್‍ಗೂ ಗೊತು’್ತ ಎಂಬ ಇಮೇಜ್ ವೈರಲ್ ಮಾಡಿದ್ದಾರೆ.
‘2018ರ ಚುನಾವಣೆಯಲ್ಲಿ ದೊಡ್ಡಗೌಡರ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಬೊಬ್ಬೆ ಹಾಕಿದರು’ ಎಂದು ಆಕ್ರೋಶ ಹೊರಹಾಕಿರುವ ಅಭಿಮಾನಿಗಳು, ‘ಆಗ ಟಿಕೆಟ್ ಕೈ ತಪ್ಪಿಲ್ಲ. ಈಗ ಸಾವಿರಾರು ಕೋಟಿ ರೂಪಾಯಿ ಕಾಮಗಾರಿ ತಂದು ಸೈ ಅನ್ನಿಸಿಕೊಂಡಿದ್ದಾರೆ. ಈಗೇಕೆ ತಪ್ಪಲಿದೆ’ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
‘ನೇರವಾಗಿ ಅವರನ್ನು ಎದುರಿಸದೇ ಹೀಗೇ ಸುಳ್ಳು ಪ್ರಚಾರ ಮಾಡುವವರು, ಬನ್ನಿ 2023ರ ವಿಧಾನಸಭೆ ಚುನಾವಣೆಗೆ’ ಎಂದು ಸವಾಲ್ ಹಾಕಿರುವ ಅವರು, ‘2023 ರ ಚುನಾವಣೆಗೆ ನಮ್ಮನ್ನ ಈ ರೀತಿ ಕೆಣಕುವ ಮೂಲಕ ಎಚ್ಚರಿಸಿದ್ದಾರೆ’ ಎಂದು ಇಮೇಜ್ ಬರಹದಲ್ಲಿ ಬರೆದುಕೊಂಡಿದ್ದಾರೆ.
‘ಕೆಲವರು ಸುಳ್ಳು ಸುದ್ದಿ ಬಿತ್ತರಿಸಿ ತೇಜೋವಧೆ ಮಾಡುತ್ತಾರೆ. ಅಂಥವರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ’ ಎಂದು ಬೆಂಬಲಿಗರನ್ನು ಸಮಾಧಾನ ಪಡಿಸುವ ಇಮೇಜ್‍ಗಳು ಗುರುವಾರ ಕ್ಷೇತ್ರಾದ್ಯಂತ ಮೊಬೈಲ್‍ಗಳಲ್ಲಿ ವೈರಲ್ ಆಗಿವೆ.