ಬಿದ್ದ ಮನೆಗಳ ವೀಕ್ಷಿಸಿದ ಶಾಸಕ ದೊಡ್ಡಗೌಡರ - Kittur


 ಬಿದ್ದ ಮನೆಗಳ ವೀಕ್ಷಿಸಿದ ಶಾಸಕ ದೊಡ್ಡಗೌಡರ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಿಂದಾಗಿ ಬಿದ್ದ ಮನೆಗಳಿಗೆ ಶಾಸಕ ಮಹಾಂತೇಶ ದೊಡ್ಡಗೌಡರ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿದರು.  ಜೊತೆಗೆ ಆಹಾರಧಾನ್ಯದ ಕಿಟ್ ವಿತರಿಸಿದರು.

ಮನೆ ಬಿದ್ದಿರುವ ಕುಟುಂಬಗಳು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರದಿಂದ ಬರುವ ಪರಿಹಾರ  ಧನವನ್ನು ತಲುಪಿಸುವ ವ್ಯವಸ್ಥೆಯನ್ನು ಸಮೀಕ್ಷೆ ಮುಗಿದ ನಂತರ ಅಧಿಕಾರಿಗಳು ಮಾಡಲಿದ್ದಾರೆ ಎಂದು ಕುಲವಳ್ಳಿ ಗ್ರಾಮ  ಪಂಚಾಯ್ತಿ  ವ್ಯಾಪ್ತಿಯ ದಿಂಡಲಕೊಪ್ಪದಲ್ಲಿ ಹೇಳಿದರು.

ಕುಲವಳ್ಳಿ, ಗಲಗಿನಮಡಾ, ಮಲ್ಲಾಪುರ, ಕಿತ್ತೂರು ವಿಧಾನ ಸಭೆ ಕ್ಷೇತ್ರದ ಯರಗೊಪ್ಪ, ಸಂಪಗಾಂವ ಗ್ರಾಮಗಳಿಗೆ ಬೇಟಿ ನೀಡಿ ಬಿದ್ದ ಮನೆಗಳ ಪರಿಶೀಲನೆ ನಡೆಸಿದರು.

ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಸ ಸಂಪಗಾವಿ, ಕಂದಾಯ ನಿರೀಕ್ಷಕ ವಿ. ಬಿ. ಬಡಗಾವಿ, ಬಿಜೆಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಉಳವಪ್ಪ ಉಳ್ಳಾಗಡ್ಡಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿಷ್ಟಪ್ಪ ಶಿಂಧೆ, ಸದಸ್ಯ ಮಹಾಂತೇಶ ಎಮ್ಮಿ, ಗ್ರಾಮ ಲೆಕ್ಕಾಧಿಕಾರಿ ಎಸ್. ಎಸ್. ಸಿದ್ದಣ್ಣವರ, ಮುಖಂಡರಾದ ಸರಸ್ವತಿ ಹೈಬತ್ತಿ, ಈರಣ್ಣ ಬಡಿಗೇರ, ಮಹಾಂತೇಶ ಕಡೇಮನಿ, ನಾಗರಾಜ ಅಸುಂಡಿ, ಕಿರಣ ಪಾಟೀಲ ಉಪಸ್ಥಿತರಿದ್ದರು.