ದೇವಸ್ಥಾನ ಅಭಿವೃದ್ಧಿಗೆ ರೂ. 1.5 ಲಕ್ಷ ದೇಣಿಗೆ - Kittur


ದೇವಸ್ಥಾನ ಅಭಿವೃದ್ಧಿಗೆ ರೂ. 1.5 ಲಕ್ಷ ದೇಣಿಗೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿರುವ ಗಜಾನನ ದೇವಾಲಯ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆ ವತಿಯಿಂದ ರೂ. 1.5 ಲಕ್ಷ ದೇಣಿಗೆ ರೂಪದಲ್ಲಿ ನೀಡಲಾಯಿತು. ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಸಂಘದ ನಿರ್ದೇಶಕ ಪ್ರದೀಪ್ ಜಿ. ಅವರು ದೇವಸ್ಥಾನದ ಟ್ರಸ್ಟ್ ಕಮೀಟಿಯವರಿಗೆ ಚೆಕ್ ಅನ್ನು ಹಸ್ತಾಂತರಿಸಿದರು. 

ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರಶಾಂತ ನಾಯ್ಕ್, ಗಜಾನನ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಈಶ್ವರ ನರಗುಂದ, ಮೇಲ್ವಿಚಾರಕಿ ವನಿತಾ ಅಂಗಡಿ, ಬಸಮ್ಮ ಪಾಟೀಲ, ಗ್ರಾಮ ಪಂಚಾಯ್ತಿ ಸದಸ್ಯರಾದ ರೇಣುಕಾ ಮಡಿವಾಳರ, ಮಲ್ಲವ್ವ ನಾವಲಗಟ್ಟಿ, ಪ್ರಮುಖರಾದ ಗಿರೀಶ ದೊಡಮನಿ, ಮೃತ್ಯುಂಜಯ ಹಿರೇಮಠ, ಅಶೋಕ ದೊಡಮನಿ, ಶಿವಾನಂದ ದೊಡಮನಿ, ಬಸವರಾಜ ಗಡೆಣ್ಣವರ, ಮಹಾಂತೇಶ ಕೋಗಿಲಗೇರಿ, ಸುಭಾಸ ಗಡೆಣ್ಣವರ, ಮಹಾಂತೇಶ ತುಪ್ಪದ, ಮಂಜುನಾಥ ಕಮ್ಮಾರ, ಬಸವರಾಜ ಗೋಕಾಕ, ರಮೇಶ ಕುಂದರನಾಡ, ಟ್ರಸ್ಟ್ ಕಮೀಟಿ ಸದಸ್ಯರು,   ನಾಗರಿಕರು ಉಪಸ್ಥಿತರಿದ್ದರು.

0/Post a Comment/Comments