ನವಭಾರತ ಸೇನೆಯಿಂದ ಜೋಳ ವಿತರಣೆ - Kittur


 ನವಭಾರತ ಸೇನೆಯಿಂದ ಜೋಳ ವಿತರಣೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ನವಭಾರತ ಸೇನೆಯ ವತಿಯಿಂದ ಮಹಿಳಾ ಪೌರ ಕಾರ್ಮಿಕರು ಮತ್ತು ಬಡವರಿಗೆ ಉಚಿತವಾಗಿ ಜೋಳ ವಿತರಿಸಲಾಯಿತು.

ಸೇನೆಯ ಸಂಚಾಲಕ ಜಗದೀಶ ಕಡೋಲಿ ಮಾತನಾಡಿ,  ಸಂಘಟನೆಯ 12 ನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆಹಾರ ಧಾನ್ಯ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಕನ್ನಡ ನಾಡು, ನುಡಿ, ನೆಲ. ಜಲ ವಿಷಯ ಬಂದಾಗ ಮುಂಚೂಣಿಯಲ್ಲಿ ನಿಂತು ಸಂಘಟನೆ ಹೋರಾಟ ಮಾಡುತ್ತ ಬಂದಿದೆ. ಅನೇಕ ರಚನಾತ್ಮಕ ಕೆಲಸ ಮಾಡುವ ಮೂಲಕ ಜನರ ಹೃದಯಲ್ಲಿ ಉಳಿಯುವ ಕಾರ್ಯವನ್ನು ನಡೆಸುತ್ತ ಬರಲಾಗಿದೆ ಎಂದು ಪುನರುಚ್ಛರಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಭೀಮರಾಣಿ ಇದ್ದರು.

0/Post a Comment/Comments