ಶತಾಯುಷಿ ಫಕ್ರುಸಾಬ ಜಕಾತಿ ನಿಧನ - Kittur


ಶತಾಯುಷಿ ಫಕ್ರುಸಾಬ ಜಕಾತಿ ನಿಧನ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯ್ತಿ ಸದಸ್ಯ, ನಿವೃತ್ತ ಪ್ರಧಾನ ಶಿಕ್ಷಕ ಎಂ. ಎಫ್. ಜಕಾತಿ ಅವರ ತಂದೆಯವರಾದ ಶತಾಯುಷಿ ಫಕ್ರುಸಾಬ ಮುಗುಟಸಾಬ ಜಕಾತಿ ಅವರು ಸ್ವಗ್ರಾಮ ತುರಮರಿಯಲ್ಲಿ ಮೇ 1 ರಂದು ರಾತ್ರಿ ನಿಧನರಾದರು.
ಅವರಿಗೆ 103 ವಯಸ್ಸಾಗಿತ್ತು. ಎಂ. ಎಫ್. ಸೇರಿದಂತೆ ಮೂವರು ಪುತ್ರರು, ಒಬ್ಬ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ.   ಮೇ 2 ರಂದು ಬೆಳಿಗ್ಗೆ 11ಕ್ಕೆ ಶೋಕತಪ್ತ ಬಂಧುಗಳು ಮತ್ತು ಅಭಿಮಾನಿಗಳ    ನಡುವೆ ತುರಮರಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.
ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ   ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಾಂಗ್ರೆಸ್  ಮುಖಂಡರಾದ ಬಾಬಾಸಾಹೇಬ ಪಾಟೀಲ, ಶಂಕರ ಹೊಳಿ, ಸಮಾಜ ಸೇವಕ ಹಬೀಬ ಶಿಲೇದಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಡಿ. ಎಂ. ದಾನೋಜಿ, ಎಸ್. ವೈ. ಹಳಿಂಗಳಿ, ಶಿಕ್ಷಕ ಬಳಗದವರು, ಬಂಧುಗಳು, ಸಾರ್ವಜನಿಕರು ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು. 


 

0/Post a Comment/Comments