ಅಂಗನವಾಡಿ ಕೇಂದ್ರದಲ್ಲಿ ಹುಳುಕು ಕಾಳು - Kittur

‘ಹುಳುಕು ಹೆಸರು ಧಾನ್ಯ ಪೂರೈಕೆ'

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕಿತ್ತೂರು ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಿಗೆ  ಹುಳುಕು ಹೆಸರುಕಾಳು  ಪೂರೈಕೆ ಮಾಡಲಾಗಿದೆ ಎಂದು ದೂರಲಾಗಿದೆ.

ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕಯುಕ್ತ ಆಹಾರಧಾನ್ಯ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿಕೊಳ್ಳುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಈ ಕಳಪೆಯಾದ ಆಹಾರಧಾನ್ಯವನ್ನು ಕಣ್ತೆರೆದು ನೋಡಬೇಕು ಎಂದು ರಾಣಿ ಚನ್ನಮ್ಮ ನವಭಾರತ ಸೇನೆ ಸಂಚಾಲಕ ಜಗದೀಶ ಕಡೋಲಿ ಆಗ್ರಹಿಸಿದರು.

ಕಳಪೆ ಕಾಳು ಸರಬರಾಜು ಮಾಡಿರುವ ಸಂಸ್ಥೆ ಮೇಲೆ ಕ್ರಮಕೈಗೊಳ್ಳಬೇಕು. ಇವುಗಳನ್ನು ವಾಪಸು ಪಡೆದು ಗುಣಮಟ್ಟದ ಆಹಾರಧಾನ್ಯ  ಮಕ್ಕಳಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.