ಯುದ್ಧ ಸ್ಥಗಿತ: ರಷ್ಯಾ ತಿರಸ್ಕಾರ - Kittur


ಯುದ್ಧ ಸ್ಥಗಿತ: ರಷ್ಯಾ ತಿರಸ್ಕಾರ
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಉಕ್ರೇನ್ ಮೇಲಿನ ಆಕ್ರಮಣವನ್ನು   ನಿಲ್ಲಿಸುವಂತೆ ಅಂತರಾಷ್ಟ್ರೀಯ ಕೋರ್ಟ್ ನೀಡಿದ ಆದೇಶವನ್ನು ರಷ್ಯಾ ತಿರಸ್ಕರಿಸಿದೆ. ಉಕ್ರೇನ್ ಮೇಲಿನ ಆಕ್ರಮಣವು ಶುಕ್ರವಾರಕ್ಕೆ 23ನೇ ದಿನಕ್ಕೆ ಕಾಲಿಟ್ಟಿದೆ.
ಉಕ್ರೇನ್‍ನಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯಿಂದಾಗಿ ಯುಎಸ್, ಬ್ರಿಟನ್, ಫ್ರಾನ್ಸ್, ಅಲ್ಬೇನಿಯಾ, ನಾರ್ವೆ ಮತ್ತು ಐಲೆರ್ಂಡ್ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ನಡೆಸಬೇಕು ಎಂದು ಆಗ್ರಹಿಸಿವೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಉಕ್ರೇನ್ ನಾಗರಿಕರ ಗುರಿಯಾಗಿರಿಸಿಕೊಂಡು ರಷ್ಯಾ ಯುದ್ಧ ಅಪರಾಧಗಳನ್ನು ಮಾಡುತ್ತಿದೆ. ಉಕ್ರೇನ್ ಮೇಲೆ ರμÁ್ಯದ ಅಕ್ರಮಣವು   ನಮಗೆಲ್ಲರಿಗೂ ಒಡ್ಡಿದ ಬೆದರಿಕೆಯಾಗಿದೆ ಎಂದು ಯುಎನ್‍ಗೆ ಬ್ರಿಟಿμï ರಾಜತಾಂತ್ರಿಕ ಮಿಷನ್ ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ ಎಂದು ವರದಿಯಾಗಿದೆ.

0/Post a Comment/Comments