ಭ್ರಷ್ಟ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ - Kittur


ಭ್ರಷ್ಟ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಪಂಜಾಬ್‍ನ ನೂತನ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಭಗವಂತ್ ಮಾನ್ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದ್ದು, ಭ್ರಷ್ಟಾಚಾರ ವಿರೋಧಿ     ಸಹಾಯವಾಣಿ ಪ್ರಾರಂಭಿಸುವುದಾಗಿ ತಮ್ಮ ಐತಿಹಾಸಿಕ ನಿರ್ಧಾರವನ್ನು ಗುರುವಾರ ಪ್ರಕಟಿಸಿದ್ದಾರೆ. 
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಅವರ ಪುಣ್ಯತಿಥಿಯ ದಿನವಾದ ಮಾರ್ಚ್ 23ರಿಂದ ಸಹಾಯವಾಣಿ ಆರಂಭವಾಗಲಿದೆ. ನನ್ನ ವೈಯಕ್ತಿಕ ವಾಟ್ಸಪ್  ನಂಬರ್ ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆಯಾಗಿದೆ. ಯಾರಾದರೂ ಲಂಚ ಕೇಳಿದರೆ ಆ ನಂಬರ್‍ಗೆ ಆಡಿಯೋ ಮತ್ತು ವಿಡಿಯೋ ಕಳುಹಿಸಿ ಕೊಡಬೇಕು ಎಂದು ಅವರು ಕೋರಿದ್ದಾರೆ.
ಯಾವುದೇ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದಿಲ್ಲ. ಏಕೆಂದರೆ ಶೇಕಡಾ 99 ರಷ್ಟು ಸರ್ಕಾರಿ ನೌಕರರು ಪ್ರಾಮಾಣಿಕರಾಗಿದ್ದಾರೆ.  ಒಂದು ಪ್ರತಿಶತದಷ್ಟು ನೌಕರರು ಮಾತ್ರ  ಭ್ರಷ್ಟರಾಗಿದ್ದಾರೆ. ಇದೇ ಸಂಖ್ಯೆ ವ್ಯವಸ್ಥೆಯನ್ನೇ ಮಲೀನಗೊಳಿಸಿದೆ. ಎಎಪಿಯಿಂದ ಮಾತ್ರ ಈ ಭ್ರಷ್ಟ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಾಧ್ಯ ಎಂದು ಅವರು ಟ್ವೀಟ್‍ನಲ್ಲಿ ಪ್ರತಿಪಾದಿಸಿದ್ದಾರೆ.
ದಿನನಿತ್ಯದ ಕೆಲಸಕ್ಕಾಗಿ ಲಂಚ ಕೇಳುವ ಅಥವಾ ಇತರ ದಷ್ಕøತ್ಯಗಳಲ್ಲಿ ತೊಡಗಿರುವ ಭ್ರಷ್ಟ ಅಧಿಕಾರಿಗಳ ವೀಡಿಯೊಗಳನ್ನು ಅಪ್‍ಲೋಡ್ ಮಾಡಲು ಈ ಸಂಖ್ಯೆಯು ಮೀಸಲಾಗಿದೆ. ಭ್ರಷ್ಟ ಅಧಿಕಾರಿಗಳಿಗೆ ಮಾದರಿ ಶಿಕ್ಷೆಯನ್ನೂ ವಿಧಿಸಲಾಗುವುದು ಎಂದು ಪ್ರಕಟಿಸಿದರು.
ಭ್ರಷ್ಟ ಅಧಿಕಾರಿಗಳಿಗೆ ನನ್ನ ಸರ್ಕಾರದಲ್ಲಿ ಸ್ಥಾನವಿಲ್ಲ, ಅಂತಹ ಯಾವುದೇ ದೂರುಗಳು ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳು ಯಾವುದೇ ರೀತಿಯ ಸಹಾನುಭೂತಿಯನ್ನು ನನ್ನಿಂದ ನಿರೀಕ್ಷಿಸಬೇಡಿ ಎಂದು ಮುಖ್ಯಮಂತ್ರಿಯು ಅಧಿಕಾರಿಗಳಿಗೆ ಕಡ್ಡಿ ಮುರಿದಂತೆ ಹೇಳಿದರು.

0/Post a Comment/Comments