ಈರಣ್ಣ ಆನಿಗೋಳ, ರುದ್ರಪ್ಪ ಅಂಗಡಿಗೆ ಗೌರವ ಡಾಕ್ಟರೇಟ್ - Kittur

ಈರಣ್ಣ ಆನಿಗೋಳ, ರುದ್ರಪ್ಪ ಅಂಗಡಿಗೆ ಗೌರವ ಡಾಕ್ಟರೇಟ್

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಇಲ್ಲಿಯ ಪ್ರತಿಭಾನ್ವಿತ ಕಲಾವಿದ ಈರಣ್ಣ ಆನಿಗೋಳ  ಹಾಗೂ ಸಾವಯವ ಕೃಷಿಯಲ್ಲಿ ಅಮೋಘ  ಸಾಧನೆ ಮಾಡಿರುವ ಹುಣಸೀಕಟ್ಟಿಯ ರುದ್ರಪ್ಪ ಅಂಗಡಿ ಅವರು ಪ್ರತಿಷ್ಠಿತ ತಮಿಳನಾಡು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.

ಬೆಂಗಳೂರು ಏಷಿಯಾ ವೇದಿಕ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯದಲ್ಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಪ್ರತಿಭಾನ್ವಿತರಿಗೆ ಗೌರವ ಪದವಿ ನೀಡಲಾಯಿತು.

ಹಾಡುಗಳು ಮತ್ತು ಸಂಗೀತ ಕ್ಷೇತ್ರದಲ್ಲಿ ಈರಣ್ಣ ಶಂಕ್ರೆಪ್ಪ ಆನಿಗೋಳ ಹಾಗೂ ಸಾವಯವ ಕೃಷಿ ವಿಭಾಗದಲ್ಲಿ ರುದ್ರಪ್ಪ ದುಂಡಪ್ಪ ಅಂಗಡಿ ಅವರಿಗೆ ಗೌರವ ಡಾಕ್ಟರೇಟ್  ಪದವಿ ಪ್ರದಾನ ಮಾಡಲಾಗಿದೆ.

 

0/Post a Comment/Comments