ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ರಾಜಕೀಯ ವಲಯದಲ್ಲಿ ವಿವಾದ ಸೃಷ್ಟಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿಗೆ ಕೇಂದ್ರ ಗೃಹ ಸಚಿವಾಲಯ ವೈ ಮಾದರಿ ಭದ್ರತೆಯನ್ನು ನೀಡಲು ನಿರ್ಧರಿಸಿದೆ.
90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಮಾಡಿದ ಕ್ರೌರ್ಯದ ನೈಜ ಘಟನೆಗಳನ್ನಾಧರಿಸಿದ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದಾಗಿ ಕೆಲವು ಸಮುದಾಯಗಳು ಅವರ ಮೇಲೆ ಹಲ್ಲೆ ಮಾಡಬಹುದೆಂಬ ಕಾರಣದಿಂದಾಗಿ ಕೇಂದ್ರವು ಈ ಭದ್ರತೆ ಒದಗಿಸುವ ತೀರ್ಮಾನಕ್ಕೆ ಬಂದಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಗ್ನಿಹೋತ್ರಿ ಅವರಿಗೆ 1 ಅಥವಾ 2 ಕಮಾಂಡೋ ಸೇರಿ ಎಂಟು ಪೊಲೀಸ್ ಸಿಬ್ಬಂದಿ ವೈ ವರ್ಗದಲ್ಲಿ ಭದ್ರತೆ ಒದಗಿಸಲಿವೆ.
ಇತರÀ ವರ್ಗಗಳ ಭದ್ರತೆ ಹೇಗಿರುತ್ತದೆ?
ಎಸ್‍ಪಿಜಿ ಅತಿ ಶ್ರೇಷ್ಠ ಭದ್ರತೆ ಪಡೆಯಾಗಿದ್ದು, ಇದನ್ನು ಭಾರತದ ಪ್ರಧಾನ ಮಂತ್ರಿಗೆ ಮಾತ್ರ ಒದಗಿಸಲಾಗಿದೆ.
ಝಡ್+ ವರ್ಗದಲ್ಲಿ 10+ ಎನ್‍ಎಸ್‍ಜಿ ಕಮಾಂಡೋಗಳು ಸೇರಿ 55 ಪೊಲೀಸ್ ಭದ್ರತಾ ಸಿಬ್ಬಂದಿಗಳಿರುತ್ತಾರೆ.
ಝಡ್ ವರ್ಗವು 4ರಿಂದ 6 ಎನ್‍ಎಸ್‍ಜಿ ಕಮಾಂಡೋಗಳು ಸೇರಿ 22 ಪೊಲೀಸ್ ಭದ್ರತಾ ಸಿಬ್ಬಂದಿಗಳನ್ನು ಹೊಂದಿರುತ್ತದೆ.
ವೈ+ ವರ್ಗವು 2ರಿಂದ 4 ಕಮಾಂಡೋಗಳು ಸೇರಿದಂತೆ 11 ಸಿಬ್ಬಂದಿಗಳ ಭದ್ರತೆಯನ್ನು ಒಳಗೊಂಡಿರುತ್ತದೆ.
ಎಕ್ಸ್ ವರ್ಗವು 2 ಪೊಲೀಸ್ ಸಿಬ್ಬಂದಿಯ ಭದ್ರತಾ ವಿವರವಾಗಿದೆ. ಇಲ್ಲಿ ಯಾವುದೇ ಕಮಾಂಡೋಗಳು ಇರುವುದಿಲ್ಲ. ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ಮಾತ್ರ ಇರುತ್ತಾರೆ.
ವಿಶೇಷ ರಕ್ಷಣಾ ಗುಂಪು (ಎಸ್‍ಪಿಜಿ), ನ್ಯಾಷನಲ್ ಸೆಕ್ಯುರಿಟಿ ಗಾಡ್ರ್ಸ್ (ಎನ್‍ಎಸ್‍ಜಿ), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ವಿವಿಐಪಿಗಳು, ವಿಐಪಿಗಳಿಗೆ ಭದ್ರತೆ ಒದಗಿಸುವ ಹೊಣೆಯನ್ನು ನಿರ್ವಹಿಸುವ ಸಂಸ್ಥೆಗಳಾಗಿವೆ. ರಾಜಕಾರಣಿಗಳು, ಉನ್ನತ ಮಟ್ಟದ ಸೆಲೆಬ್ರಿಟಿಗಳು, ಕ್ರೀಡಾಪಟುಗಳು. ವಿಐಪಿಗಳು ಮತ್ತು ವಿವಿಐಪಿಗಳನ್ನು ವಿಶೇಷವಾಗಿ ಝಡ್+ ವರ್ಗದಲ್ಲಿರುವವರನ್ನು ರಕ್ಷಿಸಲು ಎನ್‍ಎಸ್‍ಜಿ ಪಡೆ ಬಳಸಲಾಗುತ್ತದೆ. ಎನ್‍ಎಸ್‍ಜಿ ಸಿಬ್ಬಂದಿಯನ್ನು ಪ್ರಧಾನ ಮಂತ್ರಿ ಅವರ ಭದ್ರತೆ ಒದಗಿಸುವ ವಿಶೇಷ ರಕ್ಷಣಾ ಗುಂಪಿಗೂ (ಎಸ್‍ಪಿಜಿ) ನಿಯೋಜಿಸಲಾಗುತ್ತದೆ.
ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಮಾಂಡೋಗಳು ಊeಛಿಞಟeಡಿ ಮತ್ತು ಏoಛಿh ಒP5 ಸಬ್-ಮೆಷಿನ್ ಗನ್‍ಗಳು ಮತ್ತು ಆಧುನಿಕ ಸಂವಹನ ಸಾಧನಗಳೊಂದಿಗೆ ಶಸ್ತ್ರಸಜ್ಜಿತರಾಗಿರುತ್ತಾರೆ. ತಂಡದ ಪ್ರತಿಯೊಬ್ಬ ಸದಸ್ಯರು ಸಮರ ಕಲೆ ಮತ್ತು ನಿರಾಯುಧ ಯುದ್ಧ ಕೌಶಲದಲ್ಲಿ ಪ್ರಾವಿಣ್ಯತೆ ಹೊಂದಿರುತ್ತಾರೆ.
Post a Comment