‘ಕಂದಾಯ ದಾಖಲೆ ಮನೆಬಾಗಿಲಿಗೆ’ ಕಾರ್ಯಕ್ರಮ ಆರಂಭ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ರೈತರ ಮನೆಬಾಗಿಲಿಗೆ ಕಂದಾಯ ಇಲಾಖೆ ದಾಖಲೆ ವಿತರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ತಾಲ್ಲೂಕಿನ ಕಡತನಾಳ ಗ್ರಾಮದಲ್ಲಿ ಶನಿವಾರ ಪ್ರಾರಂಭಿಸಲಾಯಿತು.
ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರು, ಕಡತನಾಳ ಗ್ರಾಮದ ರೈತರೊಬ್ಬರಿಗೆ ಪಹಣಿ, ಆದಾಯ, ಜಾತಿ ಪ್ರಮಾಣಪತ್ರ ಮತ್ತು ಅಟ್ಲಾಸ್ ನಕ್ಷೆ ವಿತರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ತಾಲ್ಲೂಕಿನ 45 ಹಳ್ಳಿಗಳಲ್ಲೂ ಮನೆಬಾಗಿಲಿಗೆ ಕಂದಾಯ ದಾಖಲೆ ಒದಗಿಸುವ ಕಾರ್ಯಕ್ರಮ ಆರಂಭವಾಗಿದೆ. ಕಂದಾಯ ನಿರೀಕ್ಷಕ ವೀರಣ್ಣ ಬಡಗಾಂವಿ, ಎಂ. ಬಿ. ನಾಡಗೌಡ್ರ, ಗ್ರಾಮ ಲೆಕ್ಕಿಗರಾದ ಎಲ್. ಎಂ ಮಕಾನದಾರ, ಬಿ. ಎಫ್. ತಳವಾರ, ಸಲೀಂ ಖುದ್ದನವರ, ಮಹಾಂತೇಶ ತಡಕೋಡ, ಲೋಕೇಶ ಉಳ್ಳಿಗೇರಿ, ಬಿ. ಎಫ್. ಕೊಂಡಿಕೊಪ್ಪ, ಅಶೋಕ ಪಟಕಾಲ, ಎಸ್. ಎಸ್. ಸಿದ್ದನ್ನವರ, ಈರಣ್ಣ ಕುಂಟೀರಪ್ಪಗೋಳ ಅವರು ವಿವಿಧ ಹಳ್ಳಿಗಳ ಮನೆಬಾಗಿಲಿಗೆ ತೆರಳಿ ದಾಖಲೆ-ಪತ್ರಗಳನ್ನು ತಲುಪಿಸಿದರು.
Post a Comment