ವಿಜೃಂಭಣೆಯ ಮಹಾಬಳೇಶ್ವರ ರಥೋತ್ಸವ - Kittur



ವಿಜೃಂಭಣೆಯ ಮಹಾಬಳೇಶ್ವರ ರಥೋತ್ಸವ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು; ಪಟ್ಟಣದ ಸೋಮವಾರ ಪೇಟೆಯ ಶತಮಾನದ ಐತಿಹ್ಯ ಹೊಂದಿರುವ  ಮಹಾಬಳೇಶ್ವರ ದೇವಸ್ಥಾನದ ರಥೋತ್ಸವವು ಬುಧವಾರ ಸಂಜೆ ಭಕ್ತರ ಜಯಘೋಷಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ಆವರಣದಿಂದ ಹೊರಟ ರಥೋತ್ಸವ, ಸೋಮವಾರ ಪೇಟೆಯ ಮುಖ್ಯ ಬೀದಿಯ ಕೊನೆಯವರೆಗೂ ಸಾಗಿ ಮರಳಿ ದೇವಸ್ಥಾನದ ಪ್ರಾಂಗಣಕ್ಕೆ ಆಗಮಿಸಿ ಮುಕ್ತಾಯಗೊಂಡಿತು.
ರಥ ಸಾಗುವ ಬೀದಿಯ ಇಕ್ಕೆಲಗಳಲ್ಲಿ ನಿಂತ ಭಕ್ತರು  ಈ  ಸಂಭ್ರಮವನ್ನು ಕಣ್ತುಂಬಿಸಿಕೊಂಡರು. ರಥ ಸಾಗುವ ದಾರಿಗೆ ನೀರು ಹಾಕಿ, ತೇರಿಗೆ ಆರತಿ ಬೆಳಗಿ ಭಕ್ತಿ ಗೌರವ ಸಲ್ಲಿಸಿದರು.
ಮಹಾಶಿವರಾತ್ರಿ ಪ್ರಯುಕ್ತ ಮಹಾಬಳೇಶ್ವರ ದೇವಸ್ಥಾನದಲ್ಲಿ ಜರುಗಿದ ಎರಡು ದಿನಗಳ ಕಾರ್ಯಕ್ರಮಗಳು ರಥ ಎಳೆಯುವುದರೊಂದಿಗೆ ಮುಕ್ತಾಯಗೊಂಡವು.
ಮಂಗಳವಾರ ದೇವರಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿತು. ಬುಧವಾರ ಮಧ್ಯಾಹ್ನ ಅನ್ನಪ್ರಸಾದ ನಡೆಯಿತು.
ಎರಡು  ದಿನಗಳ  ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಸಮಿತಿ ಸದಸ್ಯರು ಯಶಸ್ವಿಯಾಗಿ ನಡೆಸಿಕೊಟ್ಟರು.

0/Post a Comment/Comments