ಕಿತ್ತೂರು ಪಟ್ಟಣದ ಅಭಿವೃದ್ಧಿಗೆ ಯೋಜನೆ : ಶಾಸಕ ದೊಡ್ಡಗೌಡರ

ಕಿತ್ತೂರು ಪಟ್ಟಣದ ಅಭಿವೃದ್ಧಿಗೆ ಯೋಜನೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿಯಂಥ ಮೂಲ ಸೌಲಭ್ಯಗಳನ್ನು ಸಮಗ್ರ ಕಿತ್ತೂರು ಪಟ್ಟಣಕ್ಕೆ ಒದಗಿಸಿಕೊಡಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಭರವಸೆ ನೀಡಿದರು.

ಇಲ್ಲಿಯ 17 ನೇ ವಾರ್ಡಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. 

ಕಿತ್ತೂರು ಶಾಸಕನಾಗಿರುವ ನನಗೆ ಇಲ್ಲಿಯ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಆದ್ಯತೆ ಮೇಲೆ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಇತಿಹಾಸ ಪ್ರಸಿದ್ಧ ಪಟ್ಟಣವನ್ನು ಸುಂದರ ಮತ್ತು ಸ್ವಚ್ಛ ನಗರವಾಗಿ ರೂಪಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದರು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದಿನೇಶ ವಳಸಂಗ ಮಾತನಾಡಿ, ಮೊನ್ನೆ ಜರುಗಿದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಈ ವಾರ್ಡಿನ ಸಾರ್ವಜನಿಕರು ನೀರಿನ ಘಟಕ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆಗೆ ಸ್ಪಂದಿಸಿ ಶಾಸಕರು ನೀರಿನ ಘಟಕ ಸ್ಥಾಪನೆ ಮಾಡಿಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ನೀರಿನ ಕ್ಯಾನ್‍ಗಳನ್ನು ಇದೇ ಸಂದರ್ಭದಲ್ಲಿ ಶಾಸಕರು ವಿತರಿಸಿದರು. 

ಮುಖ್ಯಾಧಿಕಾರಿ ಪ್ರಕಾಶ ಮಠದ,  ಅಭಿಯಂತರ ರವೀಂದ್ರ ಗಡಾದ, ಸದಸ್ಯರಾದ ಕಿರಣ ಪಾಟೀಲ, ನಾಗರಾಜ ಅಸುಂಡಿ, ದೌಲತ್ ಪರಂಡೇಕರ, ಪಾಪು ನರಗುಂದ, ಪ್ರಮೋದ ಕಾಜಗಾರ, ರಾಜು ಕಲ್ಲವಡ್ಡರ, ಗಣ್ಯರಾದ ಜಗದೀಶ ಬಿಕ್ಕಣ್ಣವರ, ಮಂಜುನಾಥ ದೊಡಮನಿ, ಚನ್ನಬಸಪ್ಪ ಮಲಶೆಟ್ಟಿ, ಸುರೇಶ ಕುರಗುಂದ, ಮಹಾದೇವಿ ಬಣಜಗಿ, ಗಾಯಿತ್ರಿ ಭಜಂತ್ರಿ, ಈರಣ್ಣ ಬಡಿಗೇರ, ಮಹಾದೇವಿ ಪರೀಟ, ಶಾಂತವ್ವ ಅರವಾಳ, ಸಂತೋಷ ಪರೀಟ, ಆಸೀಫ್ ಹಡಗಲಿ, ಈರಣ್ಣ ವಕ್ಕುಂದ, ಶಿವು ಅಕ್ಕಿ, ರಾಜು ಮಡಿವಾಳರ, ಗುತ್ತಿಗೆದಾರ ಬಾಳನಗೌಡ ಪಾಟೀಲ ಇದ್ದರು.

 

0/Post a Comment/Comments