ಕಸಾಪ ನೂತನ ಸದಸ್ಯರ ಪದಗ್ರಹಣ 20 ಕ್ಕೆ - Kittur


 ಕಸಾಪ ನೂತನ ಸದಸ್ಯರ ಪದಗ್ರಹಣ 20 ಕ್ಕೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು : ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ನೂತನ  ಪದಾಧಿಕಾರಿಗಳ ಅಧಿಕಾರ   ಸ್ವೀಕಾರ  ಮತ್ತು ಕಾರ್ಯಚಟುವಟಿಕೆಗಳ  ಉದ್ಘಾಟನೆ ಕಾರ್ಯಕ್ರಮ ಮಾ. 20 ರಂದು ಮುಂಜಾನೆ 11 ಗಂಟೆಗೆ ಸ್ಥಳೀಯ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ  ಆಯೋಜಿಸಲಾಗಿದೆ ಎಂದು ಕಸಾಪ ತಾಲೂಕು ಘಟಕದ  ಅಧ್ಯಕ್ಷ ಡಾ. ಎಸ್. ಬಿ. ದಳವಾಯಿ ತಿಳಿಸಿದರು.

ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಕವಿ ಬಿ. ಬಿ. ಕಾದ್ರೊಳ್ಳಿ ರಚನೆಯ ‘ಭಾವಲಹರಿ' ಕವನ ಸಂಕಲನವು ಬಿಡುಗಡೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಾನಿಧ್ಯ ವಹಿಸುವರು.  ಶಾಸಕ ಮಹಾಂತೇಶ ದೊಡ್ಡಗೌಡರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಟಿ. ಬಳಿಗಾರ ಅತಿಥಿಗಳಾಗಿದ್ದಾರೆ. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ನಿಕಟ ಪೂರ್ವ ಅಧ್ಯಕ್ಷ ಡಾ. ಸೋಮಶೇಖರ ಹಲಸಗಿ ಮಾತನಾಡಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕಸಾಪ ತಾಲೂಕು ಘಟಕವು ಗ್ರಾಮೀಣ ಪ್ರದೇಶದಲ್ಲಿ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿತು. ‘ಕಸಾಪ ನಡಿಗೆ,  ಶಾಲೆ ಕಡೆಗೆ' ಕಾರ್ಯಕ್ರಮವು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರಭಾವ ಬೀರಿತು ಎಂದು ಅಭಿಮಾನದಿಂದ ನುಡಿದರು.

ಗ್ರಾಮಾಂತರ ಪ್ರದೇಶದ ಕಲಾವಿದರು ಮತ್ತು ಉದಯೋನ್ಮುಖ ಬರಹಗಾರರನ್ನು ಗುರುತಿಸುವ ಕೆಲಸವು ಕಸಾಪದಿಂದ ಆಗಬೇಕಿದೆ. ಎಲ್ಲ ಪದಾಧಿಕಾರಿಗಳು ಕಾಯಾ, ವಾಚಾ ಮತ್ತು ಮನಸ್ಸಿನಿಂದ ದುಡಿಯಲಿದ್ದಾರೆ. ಎಲ್ಲರ ಸಹಕಾರದಿಂದ ಕಸಾಪ ಹೆಚ್ಚು ಜನರನ್ನು ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೌರವ ಕಾರ್ಯದರ್ಶಿ ವೀರಪ್ಪ ನಂದಿಹಳ್ಳಿ ಮಾತನಾಡಿ, ಸಾಹಿತ್ಯ ಪರಿಷತ್ತಿನ ಕಂಪು ಪಸರಿಸಲು ನೂತನ ಪದಾಧಿಕಾರಿಗಳ ಬಳಗ ಹೆಚ್ಚು ಕ್ರಿಯಾಶೀಲತೆಯಿಂದ ದುಡಿಯಲಿದೆ ಎಂದು ಭರವಸೆ ನೀಡಿದರು. 

ರಾಜು ಜಾಂಗಟಿ, ಸೋಮಶೇಖರ ಹುಣಶ್ಯಾಳ, ಜಿ. ಜಿ. ಹನುಮಸಾಗರ, ಪ್ರವೀಣ ಗಿರಿ, ಆನಂದÀ ಶಿವನವ್ವÀಗೋಳ ಉಪಸ್ಥಿತರಿದ್ದರು.

0/Post a Comment/Comments