ತಿಗಡಿ ಕೆರೆ ಅಭಿವೃದ್ಧಿಗೆ ಚಾಲನೆ - Kitturತಿಗಡಿ ಕೆರೆ ಅಭಿವೃದ್ಧಿಗೆ ಚಾಲನೆ

ಪ್ರೆಸ್‍ಕ್ಲಬ್ ವಾರ್ತೆ

ಬೈಲಹೊಂಗಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಾದರಿ ಕೆರೆ ನಿರ್ಮಾಣ ಮಾಡುವ ಕಾರ್ಯ ಮುಂದುವರೆದಿದ್ದು, ಈ ಬಾರಿ ತಾಲೂಕಿನ ತಿಗಡಿ ಕೆರೆಯನ್ನು ಪುನರುಜ್ಜೀವನಗೊಳಿಸುವ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು.

ಕೆರೆ ಅಭಿವೃದ್ಧಿ ಸಮಿತಿ ಗೌರವ ಅಧ್ಯಕ್ಷ ಶ್ರೀಕರ ಕುಲಕರ್ಣಿ ಭೂಮಿ ಪೂಜೆ ನೆರವೇರಿಸಿದರು. ಬಿಜೆಪಿ ಮುಖಂಡ ನಿಂಗನಗೌಡ ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ತಿಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಸವಣ್ಣೆವ್ವ ಓಬಳಪ್ಪ ಬಾಗಲಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ್ ಶೆಟ್ಟಿ, ಕೆರೆ ಸಮಿತಿ ಅಧ್ಯಕ್ಷÀ ಮಹಾಂತೇಶ ಜಕಾತಿ, ಕೆರೆ ಸಮಿತಿ ಉಪಾಧ್ಯಕ್ಷ ಈಶ್ವರ ನಿರಡಿ, ತಿಗಡಿ ಗ್ರಾಮ ಪಂಚಾಯಿತಿ ಪಿಡಿಒ ಗಂಗಪ್ಪ ಹಾದಿಮನಿ, ಯೋಜನಾಧಿಕಾರಿ ಪುರುμÉೂೀತ್ತಮ ಕೆ. ಹಾಗೂ ಧಾರವಾಡ ವಿಭಾಗದ ಕೆರೆ ಅಭಿಯಂತರ ನಿಂಗರಾಜ್   ಮಾಳವಾಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಕೆರೆ ಸಮಿತಿಯ ಸರ್ವಸದಸ್ಯರು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರೌಢಶಾಲೆ ವಿದ್ಯಾರ್ಥಿನಿ ನೇತ್ರಾ ಮತ್ತು ತಂಡದಿಂದ ಪ್ರಾರ್ಥನೆ ಜರುಗಿತು. ಯೋಜನಾಧಿಕಾರಿ ಪುರುಷೋತ್ತಮ ಸ್ವಾಗತಿಸಿದರು.    ಕೃಷಿ ಮೇಲ್ವಿಚಾರಕನಿಂಗಪ್ಪ ಪಾಟೀಲ ನಿರೂಪಿಸಿದರು. ಮೇಲ್ವಿಚಾರಕ ಸಿದ್ದಪ್ಪ ಚುಳುಕಿ ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಭಿವೃದ್ಧಿ ಪಡಿಸುತ್ತಿರುವ 374 ನೆಯ ಮಾದರಿ ಕೆರೆ ಇದಾಗಿದೆ. ತಿಗಡಿ ಗ್ರಾಮ ಪಂಚಾಯಿತಿ ಇದಕ್ಕೆ ಸಹಕಾರ ನೀಡಿದೆ.

0/Post a Comment/Comments