ಶಾಲೆಗಳಿಗೆ ಸೌಲಭ್ಯ ಒದಗಿಸಲು ಬದ್ಧ: ಶಾಸಕ ದೊಡ್ಡಗೌಡರ - Kittur

ಶಾಲೆಗಳಿಗೆ ಸೌಲಭ್ಯ ಒದಗಿಸಲು ಬದ್ಧ: ದೊಡ್ಡಗೌಡರ

ಪ್ರೆಸ್‍ಕ್ಲಬ್ ವಾರ್ತೆ

ಕಾದರವಳ್ಳಿ: ಹಳೆಯ ಮತ್ತು ಹೊಸ ಕಾದರವಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮೂರು ನೂತನ ಕೊಠಡಿ ನಿರ್ಮಾಣಕ್ಕೆ ಶಾಸಕ ಮಹಾಂತೇಶ  ದೊಡ್ಡಗೌಡರ ಮಂಗಳವಾರ ಭೂಮಿ  ಪೂಜೆ ನೆರವೇರಿಸಿದರು.

ಅನಂತರ ಮಾತನಾಡಿದ ಅವರು, ರೂ. 20 ಲಕ್ಷ ಅನುದಾನದಲ್ಲಿ ಹೊಸ ಕಾದರವಳ್ಳಿ ಶಾಲೆಗೆ ಎರಡು ಕೊಠಡಿ ಮತ್ತು ಹಳೆಯ ಕಾದರವಳ್ಳಿ ಶಾಲೆಯಲ್ಲಿ ಒಂದು ಕೊಠಡಿ ನಿರ್ಮಾಣ ಮಾಡಲು ರೂ.  10.60 ಲಕ್ಷ ಅನುದಾನÀ ಮಂಜೂರಾಗಿದೆ ಎಂದು ತಿಳಿಸಿದರು.  

ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು. ಮಕ್ಕಳು ಓದುವ ಕೊಠಡಿಗಳ ನಿರ್ಮಾಣದಲ್ಲಿ  ಕಳಪೆ ಕೆಲಸ ಆಗಬಾರದು ಎಂದೂ ತಾಕೀತು ಮಾಡಿದರು. 

ಕ್ಷೇತ್ರದ ಹಲವಾರು ಶಾಲೆಗಳಿಗೆ ಕೊಠಡಿ ನಿರ್ಮಿಸುವ ಅಗತ್ಯವಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ  ಅವುಗಳಿಗೆ ಅನುಮೋದನೆ ಸಿಗುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶಾಲೆಗಳಿಗೆ ಅಗತ್ಯವಿರುವ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಸೌಕರ್ಯಗಳ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.  

ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಟಿ. ಬಳಿಗಾರ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ನೋಡಲ್ ಅಧಿಕಾರಿ ಎ. ಕೆ. ಪಾಗಾದ, ಅದೃಶ್ಯಪ್ಪ ಮರಡಿ, ಅದೃಶ್ಯಗೌಡ ಪಾಟೀಲ, ನಾಗಪ್ಪ ಕಳಸನ್ನವರ, ರುದ್ರಪ್ಪ ಹೈಬತ್ತಿ, ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮನಿ, ಭೀಮಸಿ ಹೈಬತ್ತಿ, ಅಪ್ಪಣ್ಣ ಹಮ್ಮಣ್ಣವರ, ವಿಠ್ಠಲ ಹೈಬತ್ತಿ, ಈರಣ್ಣ ಶ್ರೀಪತಿ, ಎಂ. ಜಿ. ಹಿರೇಮಠ, ಮಂಜು ಹಮ್ಮಣ್ಣವರ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

 

0/Post a Comment/Comments