ಗ್ರಾಮ ಲೆಕ್ಕಿಗ ಕಚೇರಿ ಉದ್ಘಾಟನೆ
ಪ್ರೆಸ್ಕ್ಲಬ್ ವಾರ್ತೆ
ನಿಚ್ಚಣಕಿ: ನಿಚ್ಚಣಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಶಿವನೂರು ಗ್ರಾಮಕ್ಕೆ ಗ್ರಾಮ ಲೆಕ್ಕಿಗರ ನೂತನ ಕಾರ್ಯಾಲಯಕ್ಕೆ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರು ಶುಕ್ರವಾರ ಚಾಲನೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಶೋಕ ಮಾಳಗಿ, ಕಂದಾಯ ನಿರೀಕ್ಷಕ ವಿ ಬಿ ಬಡಗಾವಿ, ಗ್ರಾಮ ಲೆಕ್ಕಿಗ ಬಿ. ಎಫ್. ತಳವಾರ, ಸುನೀಲ ನರಗುಂದ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.