ಸಚಿವ ಸಂಪುಟದಿಂದ ಈಶ್ವರಪ್ಪ ಕೈಬಿಡಲು ಕಾಂಗ್ರೆಸ್ ಆಗ್ರಹ - Kittur


 ಸಂಪುಟದಿಂದ ವಜಾ ಮಾಡಲು ಕಾಂಗ್ರೆಸ್ ಆಗ್ರಹ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ರಾಷ್ಟ್ರಧ್ವಜ ಆರೋಹಣ ಮಾಡುವ ದೆಹಲಿ ಕೆಂಪು ಕೋಟೆ ಮೇಲೆ ಭಗವಾ ಧ್ವಜ ಹಾರಿಸುವ ವಿವಾದಾತ್ಮಕ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಒಬ್ಬ ಡೋಂಗಿ ರಾಷ್ಟ್ರಭಕ್ತನಾಗಿದ್ದಾನೆ ಎಂದು ಕೆಪಿಸಿಸಿ ಸಮನ್ವಯ ಅಧಿಕಾರಿ ಬಂಗಾರೇಶ ಹಿರೇಮಠ ಕಟುವಾಗಿ ಟೀಕಿಸಿದರು. 

ಇಲ್ಲಿಯ ತಹಶೀಲ್ದಾರ್ ಕಚೇರಿ ಮೂಲಕ ಸೋಮವಾರ ರಾಜ್ಯಪಾಲರಿಗೆ ಮನವಿ ಅರ್ಪಿಸುವ ಮುನ್ನ ಮಾತನಾಡಿದ ಅವರು, ಈಶ್ವರಪ್ಪ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈಶ್ವರಪ್ಪ ಹೇಳಿಕೆಯಿಂದಾಗಿ ದೇಶದ ಪ್ರಜೆಗಳಿಗೆ ದಿಗ್ಭ್ರಮೆಯಾಗಿದೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ನಿಷ್ಕಾಳಜಿ ವಹಿಸಿ ಹೇಳಿಕೆ ಕೊಟ್ಟಿರುವ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ ಮಾತನಾಡಿ, ರಾಷ್ಟ್ರೀಯತೆ, ರಾಷ್ಟ್ರಪ್ರೇಮ ಮತ್ತು ಸ್ವಾಭಿಮಾನದ ಸಂಕೇತವಾಗಿರುವ ರಾಷ್ಟ್ರಧ್ವಜ ನಮ್ಮ ಗೌರವದ ಸಂಕೇತವದು.  ಅದರ ಲಾಂಛನವನ್ನು ವಿಳಾಸ ಬದಲಿಸುವಂತೆ ಬದಲಿಸುವ ಹಾಗೆ ಭಗವಾ ಧ್ವಜ ಹಾರಿಸುವ ಹೇಳಿಕೆ ನೀಡಿರುವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು   ಎಂದು ಒತ್ತಾಯಿಸಿದರು. 

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಸೋಮವಾರದ   ಹೋರಾಟ ಸಾಂಕೇತಿಕವಾಗಿದೆ. ವಿವಾದಾತ್ಮಕ ಹೇಳಿಕೆ ನೀಡಿರುವ ಈಶ್ವರಪ್ಪ ಮೇಲೆ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ  ಎಂದು ಎಚ್ಚರಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ಅನಿಲ ಎಮ್ಮಿ ಅವರೂ ಮಾತನಾಡಿದರು.

ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪ್ರತಿಭಟನೆ ಮುಕ್ತಾಯಗೊಳಿಸಲಾಯಿತು

ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಬಿಷ್ಟಪ್ಪ ಶಿಂಧೆ, ಅಶೋಕ ಮಾಳಗಿ, ನಾಗಪ್ಪ ಕಳಸಣ್ಣವರ, ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷರಾದ ಸಂಗನಗೌಡ ಪಾಟೀಲ, ನಿಂಗಪ್ಪ  ಅರಕೇರಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮುದಕಪ್ಪ ಮರಡಿ,   ಮುಖಂಡರಾದ ಮಲ್ಲಿಕಾರ್ಜುನ ತಳವಾರ, ರಾಜು ಚೌಗಲೆ, ರಾಜೇಶ್ವರಿ ಬೆಳಗಾವಿ, ದೀಪಾ ವಜ್ರಮಟ್ಟಿ, ಮುದ್ದಪ್ಪ ಸಕ್ರೆನ್ನವರ, ರಾಜೇಂದ್ರ ಇನಾಂದಾರ್, ಮಹಾದೇವಿ ಕೋಟಗಿ, ಈಶ್ವರಿ ಮರಿತಮ್ಮನವರ, ದೀಪಾ ಕಡತನಾಳ, ಚನ್ನಪ್ಪ ಶಿಂತ್ರಿ, ಬಸವರಾಜ ಚಿಕ್ಕನಗೌಡ್ರ ಗುರುಸಿದ್ದಪ್ಪ ಜಾಂಗಟಿ, sಸಾವಂತ ಕಿರಬನವರ, ಮಡಿವಾಳಪ್ಪ ಭೋಸಲೆ, ನವೀನ ಬೇಳೂರ,  ಕಾರ್ಯಕರ್ತರು ಭಾಗವಹಿಸಿದ್ದರು.