‘ಕಂದಾಯ ಇಲಾಖೆ ನೌಕರ ಮೇಲೆ ಲಂಚದ ಆರೋಪ’
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕಿತ್ತೂರು ತಾಲ್ಲೂಕು ಕಚೇರಿ ನೌಕರರೊಬ್ಬರ ಮೇಲೆ ಹೊರ ರಾಜ್ಯ ಮೂಲದ ಉದ್ಯಮಿಯೊಬ್ಬರು ಗಂಭೀರ ಆರೋಪ ಮಾಡಿದ್ದು, ಕೆಲಸ ಮಾಡಿಕೊಡಲು ರೂ. 5.30 ಲಕ್ಷ ಲಂಚದ ಬೇಡಿಕೆ ಇಟ್ಟ ಬಗ್ಗೆ ಲಿಖಿತ ದೂರು ನೀಡಿದ್ದಾರೆ.
‘ತಾಲೂಕಿನ ಹಳ್ಳಿ ವ್ಯಾಪ್ತಿಯಲ್ಲಿ ಚಿಕ್ಕ ಕೈಗಾರಿಕೆ ತೆರೆಯಲು ‘ಕೈಗಾರಿಕೆ ಉದ್ದೇಶದ ಬಿನ್ ಶೇತ್ಕಿ' ಮಾಡಿಸಲು ಈ ನೌಕರರು ಇಷ್ಟು ದೊಡ್ಡ ಮೊತ್ತ ಬೇಡಿಕೆ ಇಟ್ಟಿದ್ದಾರೆ' ಎಂಬುದು ಅವರ ದೂರಿನ ಪ್ರಮುಖ ಅಂಶವಾಗಿದೆ.
‘ಈ ಆರೋಪದ ಬಗ್ಗೆ ಇಲಾಖೆಯೂ ವಿಚಾರಣೆ ನಡೆಸಿದೆ ಎನ್ನಲಾಗಿದೆ. ಆದರೆ ಮುಂದೆ ಏನು ಕ್ರಮ ತೆಗೆದುಕೊಂಡಿತು ಎಂಬುದು ದೂರು ನೀಡಿದವರಿಗೂ ವಿಷಯ ತಿಳಿದಿಲ್ಲ' ಎಂದು ಗೊತ್ತಾಗಿದೆ.
‘ವಿಷಯದಲ್ಲಿ ಗೊಂದಲ ಮೂಡಿಸಿ ದುಡ್ಡಿನ ಬೇಡಿಕೆ ಗೌಣವಾಗಿಸುವ ಕೆಲಸವನ್ನು ನೌಕರರು ಮಾಡುತ್ತಿದ್ದಾರೆ' ಎಂದು ಆರೋಪಿಸಲಾಗಿದೆ. ‘ಲಿಖಿತ ದೂರು ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು' ಎಂದೂ ಉದ್ಯಮಿ ಆಗ್ರಹಿಸಿದ್ದಾರೆ.
Post a Comment