ಸೇನಾಧಿಕಾರಿ ಪರವೀಜ್ ಅವರಿಂದ ರಚನಾತ್ಮಕ ಕಾರ್ಯ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: 40 ವೀರಯೋಧರನ್ನು ಬಲಿ ಪಡೆದ ಜಮ್ಮು-ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಫೆ. 14ಕ್ಕೆ ಮೂರು ವರ್ಷಗಳು ತುಂಬಿವೆ. ಇದರಂಗವಾಗಿ ಅಂದು, ನಿವೃತ್ತ ಸೇನಾಧಿಕಾರಿ ಪರವೀಜ್ ಹವಾಲ್ದಾರ ನೇತೃತ್ವದಲ್ಲಿ ವಿಧಾಯಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಮ್ಮ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರದ ಮೈದಾನದಲ್ಲಿ ಹುತಾತ್ಮರ ನೆನಪಿನಲ್ಲಿ 40 ಸಸಿಗಳನ್ನು ನೆಡಲಾಯಿತು. ತರಬೇತಿ ಕೇಂದ್ರದ ಆವರಣದಲ್ಲಿ ಅವರ ನೆನಪಿನಲ್ಲಿ ಗಿಡಗಳು ಬೆಳೆಯಲಿವೆ ಎಂದು ನಿವೃತ್ತ ಸೇನಾಧಿಕಾರಿ ಪರವೀಜ್ ತಿಳಿಸಿದರು.
2019 ಫೆ.14ರಂದು ಪುಲ್ವಾಮಾ ಜಿಲ್ಲೆಯ ಜಮ್ಮು- ಕಾಶ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‍ಪಿಎಫ್ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್ ಇದ್ದ ವಾಹನವನ್ನು ಡಿಕ್ಕಿ ಹೊಡೆಸಿ ಸ್ಫೋಟ ನಡೆಸಲಾಗಿತ್ತು. ಪಾಕಿಸ್ತಾನ ಮೂಲದ ಜೈμï ಎ- ಮೊಹಮ್ಮದ್ ಉಗ್ರಗಾಮಿ ಸಂಘಟನೆ ಈ ದಾಳಿಯಲ್ಲಿ ಭಾಗಿಯಾಗಿತ್ತು.
ಈ ದಾಳಿಗೆ ದೇಶದೆಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಭದ್ರತಾ ಪಡೆಯ ಮೇಲೆ ನಡೆದ ಅತಿದೊಡ್ಡ ದಾಳಿಯಲ್ಲಿ ಯೋಧ, ಕರ್ನಾಟಕದ ಎಚ್. ಗುರು ಕೂಡಾ ಒಬ್ಬರಾಗಿದ್ದರು.
Post a Comment