ಬೈಲೂರು ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ - Kittur


ಬೈಲೂರು ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ
ಪ್ರೆಸ್‍ಕ್ಲಬ್ ವಾರ್ತೆ
ಬೈಲೂರು: ಇಲ್ಲಿಯ ಪ್ರೌಢಶಾಲೆಗೆ ಅಗತ್ಯವಾಗಿರುವ  ಮೈದಾನ, ಶೌಚಾಲಯ ಹಾಗೂ ಆವರಣ ಗೋಡೆ ನಿರ್ಮಾಣ ಮಾಡಲು ಮಹಾತ್ಮಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 68 ಲಕ್ಷ ಬಿಡುಗಡೆಯಾಗಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದರು.
ಬೈಲೂರು ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 
ಎಂಟು ವರ್ಷಗಳ ಹಿಂದೆ ಪ್ರೌಢಶಾಲೆ ಕಟ್ಟಡ ಪ್ರಾರಂಭವಾಗಿತ್ತು. ಹಣದ ಕೊರತೆಯಿಂದಾಗಿ   ಕಟ್ಟಡ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಇದನ್ನು ನೋಡಿದ ಸಾರ್ವಜನಿಕರು ಶಾಸಕರು ಇದ್ದಾರೊ ಇಲ್ಲವೋ ಅನುಮಾನವನ್ನೂ ವ್ಯಕ್ತಮಾಡಿದ್ದರು. ಆದರೆ 2013ರ ಕಟ್ಟಡ 8 ವರ್ಷಗಳ ನಂತರ ಉದ್ಘಾಟನೆ ಆಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಅವರು ವಿಷಾದಿಸಿದರು.
ಶಾಲೆಯ   ಆವರಣದಲ್ಲಿ ಮಾಡಲಾಗುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಶಾಲೆ ಆವರಣದಲ್ಲಿ ಹಾಕಲು ಉದ್ದೇಶಿಸಿರುವ ಫೆವರ್ಸ್ 18 ಎಂ. ಎಂ ಆಗಿರಬೇಕು. ಇದಕ್ಕಿಂತ ಕಡಿಮೆ ದಪ್ಪವಿರುವ ಫೆವರ್ಸ್ ಜೋಡಣೆ ಮಾಡಬಾರದು.  ಉತ್ತಮ ಕೆಲಸವಾಗುವಂತೆ  ಪಂಚಾಯ್ತಿ ಸದಸ್ಯರು  ಮತ್ತು ಅಧಿಕಾರಿ ನಿಗಾವಹಿಸಬೇಕು ಎಂದು ಅವರು ಸಲಹೆ ನೀಡಿದರು.
ಇದೇ ಶಾಲೆಯ ವಿದ್ಯಾರ್ಥಿನಿ ಸ್ನೇಹಾ ಅಂಬಡಗಟ್ಟಿ ಗಣರಾಜ್ಯೋತ್ಸವ ಪರೇಡ್ ಹಾಗೂ ಮಂಜುನಾಥ ಕೋಟಗಿ ರಾಷ್ಟ್ರಮಟ್ಟದ ಟೇಬಲ್ ಟೆನ್ನಿಸ್  ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇವರಿಬ್ಬರಿಗೂ  ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಓದಲು ಬಡತನವಿದೆ. ಹಣದ ಬಲವಿಲ್ಲ ಎಂಬ ಕೀಳರಿಮೆ ವಿದ್ಯಾರ್ಥಿಗಳಿಗೆ ಬೇಡ. ಸರ್ಕಾರ ಎಲ್ಲ ಸವಲತ್ತುಗಳನ್ನು ನೀಡುತ್ತಿದೆ. ಪ್ರಬಲ ಇಚ್ಛೆಯನ್ನು ಮಾತ್ರ  ವಿದ್ಯಾರ್ಥಿ ಹೊಂದಿರಬೇಕು ಎಂದರು. 
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಟಿ. ಬಳಿಗಾರ, ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮನಿ, ಕಲ್ಲಪ್ಪ ಕಟಗಿ, ಕಿರಣ ಪಾಟೀಲ, ರಾಮಣ್ಣ ಹೆಬ್ಬಳ್ಳಿ, ಚಿಂತಾಮಣಿ ಸ್ವಾಮೀಜಿ  ಹಿರೇಮಠ, ರುದ್ರಪ್ಪ ಇಟಗಿ ಸಂಗಮೇಶ ಹಿರೇಮಠ, ಶಂಕರಗೌಡ ಪಾಟೀಲ, ನಾಗೇಶ ಬೆಣ್ಣಿ, ನಾಗೇಶ ಮರೆಪ್ಪಗೋಳ, ಸಂಗಯ್ಯ ಹಿರೇಮಠ,  ಬಸವರಾಜ ಲದ್ದಿಮಠ, ಸುರೇಶ ಕುರಗುಂz,À ಶಿಕ್ಷಕರು, ವಿದ್ಯಾರ್ಥಿಗಳು,  ನಾಗರಿಕರು ಉಪಸ್ಥಿತರಿದ್ದರು.

 ಪಿಯು ಕಾಲೇಜು ಭರವಸೆ
ಬೈಲೂರು: ಬರುವ ಸೋಮವಾರದಿಂದ ಪ್ರಾರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಬೈಲೂರಿಗೆ ಪಿಯು ಕಾಲೇಜು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಭರವಸೆ ನೀಡಿದರು.
ಊರಿನ ಪ್ರಮುಖರು ಈ ಬೇಡಿಕೆ ಮಂಡಿಸಿದ್ದರಿಂದ ಅದಕ್ಕೆ ಸ್ಪಂದಿಸಿದ ಶಾಸಕರು, ಈ ಕುರಿತು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.
ರೂ. 2 ಕೋಟಿ ಅನುದಾನದಲ್ಲಿ 3 ಕಿ.ಮೀ ಅಂತರದ ಬೈಲೂರು- ದೇವರಶೀಗಿಹಳ್ಳಿ ರಸ್ತೆಯನ್ನು ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ದೊಡ್ಡಗೌಡರ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್ ಸಹ ನೆರವೇರಿತು. 35 ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಪತ್ರ ವಿತರಿಸಲಾಯಿತು.

0/Post a Comment/Comments