‘ಉದ್ಯೋಗ ವಾಹಿನಿ ಜಾಗೃತಿ ರಥ'ಕ್ಕೆ ಚಾಲನೆ - Kittur


‘ಉದ್ಯೋಗ ವಾಹಿನಿ ಜಾಗೃತಿ ರಥ'ಕ್ಕೆ ಚಾಲನೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ  ಖಾತ್ರಿ ಯೋಜನೆಯಡಿ  ಕೈಗೊಳ್ಳಲಾಗುವ ಕಾಮಗಾರಿಗಳ ಮಾಹಿತಿಯನ್ನು ತಾಲೂಕಿನ ಪ್ರತಿ ಗ್ರಾಮದ ಸಾರ್ವಜನಿಕರಿಗೆ ನೀಡುವ ಉದ್ದೇಶದೊಂದಿಗೆ ಹೊರಟ ‘ಉದ್ಯೋಗ ವಾಹಿನಿ ಜಾಗೃತಿ ರಥ'ಕ್ಕೆ ಇತ್ತೀಚೆಗೆ ಇಲ್ಲಿಯ ತಾಲೂಕು ಪಂಚಾಯ್ತಿ ಆವರಣದಲ್ಲಿ ಚಾಲನೆ ನೀಡಲಾಯಿತು.

ರಥ ಸಂಚಾರಕ್ಕೆ ಚಾಲನೆ ನೀಡಿದ ತಾಲೂಕು ಪಂಚಾಯ್ತಿ ವ್ಯವಸ್ಥಾಪಕ ರಾಮು ಸೊಗಲಿ ಅವರು ಮಾತನಾಡಿ, ‘ಪ್ರಸಕ್ತ ಸಾಲಿನ ಈ ಯೋಜನೆಯಲ್ಲಿ ಕಾರ್ಮಿಕ ಆಯವ್ಯಯ ಸಿದ್ಧಪಡಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರು, ಸಾರ್ವಜನಿಕರು ತಮಗೆ ಅಗತ್ಯವಿರುವ ವೈಯಕ್ತಿಕ ಕಾಮಗಾರಿ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ' ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ  ಮಡಿವಾಳಪ್ಪ ಚಿನ್ನಣ್ಣವರ, ಯಲ್ಲಪ್ಪ ಹುಲಿಮನಿ, ಟಿಪ್ಪು ಸುಲ್ತಾನ್ ಕಾದ್ರೊಳ್ಳಿ, ಅವಿನಾಶ ಬೆಟಗಾರ, ಆರ್.ಆರ್.ಬಡಿಗೇರ, ಅಶ್ವಿನಿ ಮಳಗಿ, ಎಸ್.ಬಿ.ಜವಳಿ, ನಿಂಗಪ್ಪ ಬಾರ್ಕಿ, ಅಡಿವೇಶ ಕುಲರ್ಣಿ, ಬಸವರಾಜ ಹೊಸಮನಿ ಉಪಸ್ಥಿತರಿದ್ದರು.

0/Post a Comment/Comments