ಶ್ರೀಗಳಿಂದ ಆಶೀರ್ವಾದ ಪಡೆದ ಜಾರಕಿಹೊಳಿ
ಪ್ರೆಸ್‍ಕ್ಲಬ್ ವಾರ್ತೆ
ಬೈಲಹೊಂಗಲ: ಇಲ್ಲಿಯ ದುರ್ಗಾದೇವಿ ದೇವಸ್ಥಾನಕ್ಕೆ ಮಂಗಳವಾರ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಭೇಟಿ ನೀಡಿ ಧರ್ಮದರ್ಶಿ ವೇದಮೂರ್ತಿ ಡಾ. ಮಹಾಂತಯ್ಯ ಶಾಸ್ತ್ರಿ ಅವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಲಖನ್ ಅವರು, ನಾಡಿನ ಜನತೆ ಮೇಲೆ ಶ್ರೀ ಮಾತಾ ದುರ್ಗಾ ಪರಮೇಶ್ವರಿ ಆಶೀರ್ವಾದವಿದೆ. ತಾಯಿಯ ಮಹಿಮೆ ಅಪಾರವಾಗಿದೆ. ಸನ್ನಿಧಿಗೆ ಬರುವ ಭಕ್ತರಿಗೆ ದೇವಿಯು ಒಳ್ಳೆಯದು ಮಾಡುತ್ತಾಳೆ' ಎಂದು ನುಡಿದರು.
ಗಂಗಾಧರ ಸಾಲಿಮಠ, ಮಲ್ಲಿಕಾರ್ಜುನ ಕಮತಗಿ, ಸಂತೋಷ ಪಶುಪತಿಮಠ, ಬಸವರಾಜ ಕಟ್ಟಿಮನಿ, ಪ್ರಶಾಂತ ಹಿರೇಮಠ, ದೇವಸ್ಥಾನದ ಸದ್ಭಕ್ತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
Post a Comment