‘ಅಜ್ಞಾನ ನೀಗಿಸಿ ಪ್ರಜ್ಞೆ ಬೆಳೆಸುವವ ನೈಜ ಗುರು' : ರಮಾನಂದ ಶರಣರು


 ‘ಅಜ್ಞಾನ ನೀಗಿಸಿ ಪ್ರಜ್ಞೆ ಬೆಳೆಸುವವ ನೈಜ ಗುರು'

ಪ್ರೆಸ್‍ಕ್ಲಬ್ ವಾರ್ತೆ

ಕಾದರವಳ್ಳಿ: ಮಾನವನಲ್ಲಿಯ ಅಜ್ಞಾನ ಹೋಗಲಾಡಿಸಿ ಪ್ರಜ್ಞಾವಂತನಾಗಿಸುವವ ನಿಜವಾದ ಗುರುವಾಗಿರುತ್ತಾರೆ. ಅಹಂ ದೋಷ ನಿವಾರಿಸಿ ಮನಸ್ಸಿನ ಕಲ್ಮಶವನ್ನು ದೂರ ಮಾಡುತ್ತಾರೆ  ಎಂದು ತುಳಸಿಗೇರಿಯ ರಮಾನಂದ ಶರಣರು ನುಡಿದರು.

ಇಲ್ಲಿಯ ಶ್ರೀರಾಮ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಳಪ್ಪಜ್ಜ ಮಹಾರಾಜರ 22ನೆಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ   ಅವರು ಮಾತನಾಡಿದರು.

ಮನಸ್ಸಿನ ಅವಗುಣ ದೂರಮಾಡಿ ಗುರುವಾದವ   ನಮ್ಮನ್ನು ಶುದ್ಧಗೊಳಿಸುತ್ತಾರೆ. ಸಾತ್ವಿಕತೆ ತುಂಬುತ್ತಾರೆ ಎಂದು ಅವರು ವಿವರಿಸಿದರು.  

ಶ್ರೀರಾಮ ಮಂದಿರದÀ ಪೀಠಾಧಿಪತಿ  ಗುರುಪುತ್ರ ಮಹಾರಾಜರು ಅಧ್ಯಕ್ಷತೆ ವಹಿಸಿದ್ದರು. ಬುದ್ನಿಯ ಪ್ರಭಾನಂದ ಸ್ವಾಮೀಜಿ, ಸವಟಗಿಯ ನಿಂಗಯ್ಯ ಸ್ವಾಮೀಜಿ, ಚೆನ್ನಪ್ಪ ಶರಣರು ಮತ್ತು ತಿಗಡೊಳ್ಳಿ, ಬೈಲೂರು, ಅಂಕಲಗಿ ಹಾಗೂ ಕಾದರವಳ್ಳಿಯ ಸುತ್ತಮುತ್ತಲಿನ ಗ್ರಾಮದ ಭಕ್ತರು   ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಕ್ತರು ಮಂಗಳಾರುತಿ ಹಾಡು ಹಾಡಿದರು. ಮಹಾ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

0/Post a Comment/Comments