ದಿವಂಗತ ಬಸಲಿಂಗಯ್ಯಗೆ ನುಡಿನಮನ 19ಕ್ಕೆ - Kittur

ದಿವಂಗತ ಬಸಲಿಂಗಯ್ಯಗೆ ನುಡಿನಮನ 19ಕ್ಕೆ

ಪ್ರೆಸ್‍ಕ್ಲಬ್ ವಾರ್ತೆ

ಬೈಲೂರು: ಜಾನಪದ ವಿದ್ವಾಂಸ, ಕಂಚಿನ ಕಂಠದ ಗಾಯಕ, ಸಾವಿರಾರು ಹಾಡುಗಳ ಮೂಲಕ ಲಕ್ಷಾಂತರ ಜನರ ಹೃದಯಲ್ಲಿ ನಲೆಸಿರುವ ಇಲ್ಲಿಯ ಬಸಲಿಂಗಯ್ಯ ಸಂಗಯ್ಯ ಹಿರೇಮಠ ಅವರಿಗೆ ನಿಷ್ಕಲ ಮಂಟಪದ ಹರ್ಡೇಕರ ಮಂಜಪ್ಪ ಸಭಾಭವನದಲ್ಲಿ ಫೆ. 19 ರಂದು ಸಂಜೆ 6.30ಕ್ಕೆ ನುಡಿನಮನ ಕಾರ್ಯಕ್ರಮ ನಡೆಯಲಿದೆ.

ಬೈಲೂರು ನಿಷ್ಕಲ ಮಂಟಪ-ಮುಂಡರಗಿಯ ತೋಂಟದಾರ್ಯಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿ, ಗೋಣಿ ರುದ್ರದೇವರು, ಗದಗ ಮಹಾಂತ ದೇವರ ನೇತೃತ್ವವಿದೆ.

ಅಥಣಿಯ ದೇವದಾಸಿ ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ. ಎಲ್. ಪಾಟೀಲ ಅಧ್ಯಕ್ಷತೆ ವಹಿಸುವರು. ವಿಶ್ವೇಶ್ವರಿ ಬಸಲಿಂಗಯ್ಯ ಉಪಸ್ಥಿತರಿರುವರು. 

ಶಾಸಕ ಮಹಾಂತೇಶ ದೊಡ್ಡಗೌಡರ, ಮಾಜಿ ಶಾಸಕರಾದ ಮಹಾಂತೇಶ ಕವಟಗಿಮಠ, ಎನ್. ಎಚ್. ಕೋನರೆಡ್ಡಿ, ಕಾಂಗ್ರೆಸ್ ಮುಖಂಡ ಬಾಬಾಸಾಹೇಬ ಪಾಟೀಲ, ಶಂಕರ ಹಲಗತ್ತಿ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ಪ್ರಕಾಶ ಉಡಕೇರಿ, ವೀರೇಶ ಕಂಬಳಿ, ಬಸಪ್ಪ ಬಸೆಟ್ಟಿ, ದೇವೇಂದ್ರ ಪಾಟೀಲ, ಬಸವರಾಜ ದೊಡಮನಿ, ನಿಜಲಿಂಗಯ್ಯ ಹಿರೇಮಠ, ಜಗದೀಶ ವಸ್ತ್ರದ, ವೀರೇಶ ಹಲಕಿ, ಬಸವರಾಜ ಜಿಗಜಿನ್ನಿ, ಪ್ರೊ. ಎನ್. ಎಸ್. ಗಲಗಲಿ, ಶಿವನಗೌಡ ಪಾಟೀಲ, ಶಂಕರ ಹೊಳಿ ಅತಿಥಿಗಳಾಗಿದ್ದಾರೆ. 

ಹಳಿಯಾಳದ ಚಂದ್ರಶೇಖರ ಓಶಿಮಠ ಅವರಿಂದ ವಚನ ಗಾಯನವಿದೆ. ರತಿಕಾ ನೃತ್ಯ ನಿಕೇತನ ತಂಡದ ಕಲಾವಿದರು ನೃತ್ಯ ಪ್ರಸ್ತುತ ಪಡಿಸಲಿದ್ದಾರೆ. ಬಸವರಾಜ ಕುಪ್ಪಸಗೌಡ್ರ ಮತ್ತು ಶಿವಮೂರ್ತಿ ಕುರಗುಂದ ಕಾರ್ಯಕ್ರಮ ನಿರೂಪಿಸಲಿದ್ದಾರೆ.

 

0/Post a Comment/Comments