ತಿಗಡೊಳ್ಳಿ: ಗಾಂಧಿ ಹುತಾತ್ಮ ದಿನ ಆಚರಣೆ - Kittur


ತಿಗಡೊಳ್ಳಿ: ಗಾಂಧಿ ಹುತಾತ್ಮ ದಿನ ಆಚರಣೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ತಿಗಡೊಳ್ಳಿ ಗ್ರಾಮದ ಹೊರವಲಯದಲ್ಲಿರುವ ಗಾಂಧಿಗಿಡದ ನೆರಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಭಾನುವಾರ ಹುತಾತ್ಮ ದಿನಾಚರಣೆ ಕಾರ್ಯಕ್ರಮ ನೆರವೇರಿತು.
ಬೈಲೂರು ಸರ್ಕಾರಿ ಹೈಸ್ಕೂಲ್ ಶಿಕ್ಷಕ ಮಂಜುನಾಥ ಕಳಸಣ್ಣವರ ಮಾತನಾಡಿ, ಎಲ್ಲ ಜನಾಂಗದ ಸುಖವನ್ನು ಬಯಸಿದವರು ಮಹಾತ್ಮ ಗಾಂಧೀಜಿ ಆಗಿದ್ದರು. ಸ್ವರಾಜ್ಯ ಕನಸಾಗಿತ್ತು. ಅದು ಈಡೇರಿದೆ. ಸುರಾಜ್ಯ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕಾಗಿದೆ ಎಂದರು.
ಜಾನಪದ ವಿದ್ವಾಂಸ ದಿವಂಗತ ಡಾ. ಬಸವರಾಜ ಮಲಶೆಟ್ಟಿ ಅವರು ರೂ. 80 ಸಾವಿರ ವೆಚ್ಚ ಮಾಡಿ ಈ ಸ್ಥಳ ನವೀಕರಣ ಮಾಡಿದ್ದರು. ಪ್ರತಿವರ್ಷ ಇಲ್ಲಿ ಹುತಾತ್ಮ ದಿನದಂದು ಗಾಂಧೀಜಿ ಸ್ಮರಣೆ ಕಾರ್ಯಕ್ರಮ ನೆರವೇರಿಸುತ್ತ ಬರಲಾಗುತ್ತಿದೆ ಎಂದು ನುಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಶೋಕ ಕಳಸಣ್ಣವರ, ಉಪಾಧ್ಯಕ್ಷೆ ಸವಿತಾ ಗೋದಳ್ಳಿ, ಶಿಕ್ಷಕಿ ಅಕ್ಷತಾ ಪಾಟೀಲ, ಗಣ್ಯರಾದ ಕಲ್ಲಪ್ಪ ಮಲಶೆಟ್ಟಿ, ಗೋಪಾಲ ಹುಕ್ಕೇರಿ, ಜಗದೀಶ ಗೋದಳ್ಳಿ, ಚನಬಸಪ್ಪ ಮಲಶೆಟ್ಟಿ, ಮಂಜುನಾಥ ಹಂಚಿನಮನಿ, ಬಸವರಾಜ ಮಲಶೆಟ್ಟಿ, ಕಲ್ಮೇಶ ಬೋಗೂರ, ಸುನೀಲ ಮಲಶೆಟ್ಟಿ, ಕಲ್ಲಪ್ಪ ಕಳಸಣ್ಣವರ, ಮುದಕಪ್ಪ ಮಲಶೆಟ್ಟಿ ಇದ್ದರು.

0/Post a Comment/Comments