ಕಲಾವಿದ ಬಸಲಿಂಗಯ್ಯ ಹಿರೇಮಠ ಅಂತ್ಯಕ್ರಿಯೆ ಸೋಮವಾರ - Kittur
 ಕಲಾವಿದ ಬಸಲಿಂಗಯ್ಯ ಅಂತ್ಯಕ್ರಿಯೆ ಸೋಮವಾರ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಅಗಲಿದ ಜನಪದ ವಿದ್ವಾಂಸ ಹಾಗೂ ಸಾವಿರ ಹಾಡಿನ ಸರದಾರ ಬಸಲಿಂಗಯ್ಯ ಹಿರೇಮಠ  ಅವರ ಪಾರ್ಥೀವ  ಶರೀರದ ಅಂತ್ಯಕ್ರಿಯೆ ಜ. 10 ರಂದು ಬೆಳಿಗ್ಗೆ 11.30 ಗಂಟೆಗೆ ತಾಲೂಕಿನ ಸ್ವಗ್ರಾಮ ಬೈಲೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಯಕೃತ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರು, ಅಲ್ಲಿಯೇ  ಕೊನೆಯ ಉಸಿರೆಳೆದರು. ಅಲ್ಲಿಂದ ಅವರ ಕರ್ಮಭೂಮಿ ಧಾರವಾಡಕ್ಕೆ ಆಗಮಿಸುವ ಪಾರ್ಥೀವ ಶರೀರವನ್ನು ಸಪ್ತಾಪುರ 7ನೇ ಅಡ್ಡ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಸಾರ್ವಜನಿಕರ   ದರ್ಶನಕ್ಕೆ ಇಡಲಾಗುವುದು. ರಾತ್ರಿ ಬೈಲೂರು ಗ್ರಾಮಕ್ಕೆ ತರಲಾಗುವುದು ಎಂದು ತಿಳಿದುಬಂದಿದೆ.

ಬೈಲೂರು  ನಿಷ್ಕಲ ಮಂಟಪದ ನಿಜಗುಣಾನಂದ   ಸ್ವಾಮೀಜಿ ಮಾರ್ಗದರ್ಶನದಲ್ಲಿ ತವರು ಗ್ರಾಮದಲ್ಲಿ ಅಂತ್ಯಕ್ರಿಯೆಯ  ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅವರ ಧರ್ಮ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ಜರುಗಲಿವೆ. ಮಾಹಿತಿಗಾಗಿ : 6362038195

0/Post a Comment/Comments