‘ಕಿತ್ತೂರಲ್ಲಿಯೇ ಕೋಟೆ ಪ್ರತಿರೂಪ ನಿರ್ಮಿಸಿ'
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇತಿಹಾಸ ಪ್ರಸಿದ್ಧ ಕೋಟೆ ಮರುನಿರ್ಮಾಣ ಮಾಡಲು ಸರ್ಕಾರ ಬಯಸಿದ್ದು, ಅದನ್ನು ಕಿತ್ತೂರಲ್ಲಿಯೇ ನಿರ್ಮಿಸಬೇಕು. ಅಂದರೆ ಮಾತ್ರ ಈಗಿನ ಭಗ್ನಕೋಟೆಯ ಮಹತ್ವ ಹೆಚ್ಚಲಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ತಿಳಿಸಿದೆ.
ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರಿಗೆ ಶನಿವಾರ ಮನವಿ ಸಲ್ಲಿಸಿ ಈ ಒತ್ತಾಯ ಮಾಡಿದ ಅವರು, ಬೇರೆ ಗ್ರಾಮದಲ್ಲಿ ನಿರ್ಮಾಣ ಮಾಡುವುದು ಸೂಕ್ತವಲ್ಲ ಎಂದು ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸನ್ನವರ ಹೇಳಿದರು.
ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಕಾರ್ಯದರ್ಶಿ ವಿನಾಯಕ ಗಾಣಗಿ, ಸದಸ್ಯರಾದ ಸುಭಾಸ ಹಂಚಿನಮನಿ, ರಾಜು ಜಾಂಗಟಿ, ವಿಠ್ಠಲ ಧರೆಣ್ಣವರ, ಬಸವರಾಜ ಕೆಳಗಡೆ, ಪ್ರವೀಣ ಮುಪ್ಪಯ್ಯನವರಮಠ, ಫಕ್ಕೀರಪ್ಪ ಬಡ್ಲಿ, ಅಶೋಕ ಇಟಗಿ, ಕಲ್ಮೇಶ ಬೋಗೂರ, ವೆಂಕಟೇಶ ಹಂಚಿನಮನಿ, ಯಲ್ಲಪ್ಪ ವರಗನ್ನವರ, ಶಿವರುದ್ರಪ್ಪ ಚಿನ್ನನ್ನವರ, ಜಗದೀಶ ಚಿಕ್ಕೇರಿ, ಜಗದೀಶ ಕೆರಿಮಠ, ಮಹಮ್ಮದಹಯಾತ್ ಸೌದಾಗರ ಹಾಜರಿದ್ದರು.
Post a Comment